
ಪಿಟಿಐ
ವಂದೇ ಭಾರತ್ ರೈಲು
ಕೋಲ್ಕತ್ತ: ಹೌರಾ–ಕಾಮಾಕ್ಯ ನಡುವೆ ಸಂಚರಿಸುವ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನ ಮೆನುವಿನಲ್ಲಿ ಮಾಂಸಾಹಾರ ಕೂಡ ಶೀಘ್ರವೇ ಸೇರ್ಪಡೆಯಾಗಲಿದೆ ಎಂದು ಪೂರ್ವ ರೈಲ್ವೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 17ರಂದು ಹಸಿರು ನಿಶಾನೆ ತೋರಿದ್ದರು. ರೈಲಿನಲ್ಲಿ ಸಸ್ಯಾಹಾರ ಮಾತ್ರ ನೀಡುವ ಬಗ್ಗೆ ಕೆಲ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ರಾಜಧಾನಿ ಎಕ್ಸ್‌ಪ್ರೆಸ್, ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ವಂದೇ ಭಾರತ್ ಇತರ ರೈಲುಗಳಲ್ಲಿ ಈಗಾಗಲೇ ಮಾಂಸಾಹಾರ ಆಯ್ಕೆ ಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.