ADVERTISEMENT

VandeMatram150 | ವಂದೇ ಮಾತರಂ ಗೀತೆ ಭಾರತೀಯರ ಆತ್ಮದ ಧ್ವನಿ: ಅಮಿತ್ ಶಾ

ಪಿಟಿಐ
Published 7 ನವೆಂಬರ್ 2025, 4:06 IST
Last Updated 7 ನವೆಂಬರ್ 2025, 4:06 IST
<div class="paragraphs"><p>ಅಮಿತ್ ಶಾ</p></div>

ಅಮಿತ್ ಶಾ

   

(ಪಿಟಿಐ ಚಿತ್ರ)

ನವದೆಹಲಿ: ‘ವಂದೇ ಮಾತರಂ’ ಗೀತೆ ಇಂದಿಗೂ ದೇಶದ ಜನರ ಹೃದಯದಲ್ಲಿ ರಾಷ್ಟ್ರೀಯತೆಯ ಕಿಡಿಯನ್ನು ಹೊತ್ತಿಸುತ್ತಲೇ ಇದೆ. ಯುವಜನರಲ್ಲಿ ಏಕತೆ, ದೇಶಭಕ್ತಿ ಮತ್ತು ಶಕ್ತಿಯ ಮೂಲವಾಗಿ ಉಳಿದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.

ADVERTISEMENT

2025ರ ನವೆಂಬರ್ 7 ರಿಂದ 2026ರ ನವೆಂಬರ್ 7ರವರೆಗೆ ನಡೆಯುವ ಭಾರತದ ರಾಷ್ಟ್ರೀಯ ಗೀತೆ 'ವಂದೇ ಮಾತರಂ' ರಚನೆಯ 150ನೇ ವಾರ್ಷಿಕೋತ್ಸವದ ವರ್ಷಾಚರಣೆ ಕುರಿತು ಪೋಸ್ಟ್‌ ಹಂಚಿಕೊಂಡಿರುವ ಶಾ, ‘ಈ ಹಾಡು ಕೇವಲ ಪದಗಳ ಸಂಗ್ರಹವಲ್ಲ, ಅದು ಭಾರತೀಯರ ಆತ್ಮದ ಧ್ವನಿಯಾಗಿದೆ’ ಎಂದು ಹೇಳಿದ್ದಾರೆ.

‘ಇಂಗ್ಲಿಷರ ಆಡಳಿತದ ವಿರುದ್ಧ, ‘ವಂದೇ ಮಾತರಂ’ ಗೀತೆ ರಾಷ್ಟ್ರವನ್ನು ಒಂದುಗೂಡಿಸಿತು ಜತೆಗೆ ಸ್ವಾತಂತ್ರ್ಯದ ಪ್ರಜ್ಞೆಯನ್ನು ಬಲಪಡಿಸಿತು. ಮಾತೃಭೂಮಿಗಾಗಿ ಸಮರ್ಪಣೆ, ಹೆಮ್ಮೆ ಮತ್ತು ತ್ಯಾಗದ ಮನೋಭಾವವನ್ನು ಜನರಲ್ಲಿ ಜಾಗೃತಗೊಳಿಸಿತು’ ಎಂದಿದ್ದಾರೆ.

‘ನಮ್ಮ ರಾಷ್ಟ್ರೀಯ ಗೀತೆಗೆ ಈ ವರ್ಷ 150 ವರ್ಷ ತುಂಬುತ್ತಿದೆ. ಹೀಗಾಗಿ ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ಒಟ್ಟಾಗಿ ಪೂರ್ಣ ಆವೃತ್ತಿಯನ್ನು ಹಾಡುವ ಮೂಲಕ ಈ ಗೀತೆಯನ್ನು ಸ್ಮರಿಸಬೇಕು. ಇದರಿಂದ ಅದು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯ ಕೇಂದ್ರವಾಗಿ ಉಳಿಯುತ್ತದೆ’ ಶಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.