ADVERTISEMENT

‘ವಂದೇ ಮಾತರಂ’ ಕಾಲಾತೀತ ಗೀತೆ: ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌

ಪಿಟಿಐ
Published 7 ನವೆಂಬರ್ 2025, 12:39 IST
Last Updated 7 ನವೆಂಬರ್ 2025, 12:39 IST
   

ನವದೆಹಲಿ: ‘ವಂದೇ ಮಾತರಂ’ ಗೀತೆಯು ಕಾಲಾತೀತವಾಗಿದ್ದು, ರಾಷ್ಟ್ರೀಯತೆಯ ಭಾವವನ್ನು ಎಚ್ಚರಗೊಳಿಸುತ್ತದೆ ಹಾಗೂ ಅದು ಮುಂದಿನ ಜನಾಂಗಕ್ಕೂ ಪ್ರೇರಣೆಯಾಗುತ್ತಿದೆ ಎಂದು ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ಅವರು ಶುಕ್ರವಾರ ಬಣ್ಣಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ ಅಲ್ಲಿ ಪೋಸ್ಟ್‌ ಮಾಡಿರುವ ಅವರು ‘ನಾವು ವಂದೇ ಮಾತರಂ ಗೀತೆಯ 150ನೇ ವರ್ಷದ ಸಂಭ್ರಮದಲ್ಲಿದ್ದೇವೆ. ಈ ಸಮಯದಲ್ಲಿ ನಾನು ಆ ಗೀತೆಗೆ ಗೌರವವನ್ನು ಸೂಚಿಸಲು ಬಯಸುತ್ತೇನೆ. ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರು 1875ರ ನವೆಂಬರ್‌ 7ರಂದು ಅಕ್ಷಯ ನವಮಿ ಪ್ರಯುಕ್ತ ವಂದೇ ಮಾತರಂ ರಚಿಸಿದ್ದರು. ಮಾತೃ ಭೂಮಿಯನ್ನು ದೈವತ್ವಕ್ಕೆ ಹೋಲಿಕೆ ಮಾಡಿದ್ದರು’ ಎಂದು ಹೇಳಿದ್ದಾರೆ.

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಂದೇ ಮಾತರಂ ಗೀತೆಯು ಶಕ್ತಿಯಾಗಿ ಬಳಕೆಯಾಗಿತ್ತು. ರಾಷ್ಟದಾದ್ಯಂತ ದೇಶ ಭಕ್ತಿಯನ್ನು ಉದ್ದೀಪಿಸಲು ಹಾಗೂ ಎಲ್ಲಾ ಜಾತಿ, ಧರ್ಮ, ಭಾಷಿಕ ಜನರನ್ನು ಒಟ್ಟುಗೂಡಿಸುವಲ್ಲಿ ವಂದೇ ಮಾತರಂ ಗೀತೆಯು ಮಹತ್ತರ ಪಾತ್ರ ವಹಿಸಿತ್ತು ಎಂದು ತಿಳಿಸಿದ್ದಾರೆ.

ADVERTISEMENT

ವಂದೇ ಮಾತರಂ ಗೀತೆಯು ಭಾರತದ ಸಂಸ್ಕೃತಿ ಹಾಗೂ ನಾಗರೀಕ ಮೌಲ್ಯಗಳ ಪ್ರತೀಕವಾಗಿದೆ. ಅದು ರಾಷ್ಟ್ರೀಯತೆ ಮತ್ತು ದೈವಿಕತೆಯನ್ನು ಒಳಗೊಂಡಿದೆ. ಅದರಲ್ಲಿರುವ ಪ್ರತಿ ಶಬ್ದಗಳು ಕೂಡ ಪ್ರತಿಯೊಬ್ಬ ಭಾರತೀಯನಿಗೂ ದೇಶಭಕ್ತಿಗೆ ಸ್ಫೂರ್ತಿಯಾಗಿದೆ. ಸಂವಿಧಾನ ಸಭೆಯು ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆಯ ಸ್ಥಾನಮಾನ ನೀಡಲು ಒಪ್ಪಿಕೊಂಡಿದೆ. ಜನ ಗಣ ಮನ ಹಾಗೂ ವಂದೇ ಮಾತರಂ ಗೀತೆಗಳಿಗೆ ಸಮಾನ ಗೌರವ ನೀಡಬೇಕು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.