ADVERTISEMENT

ತರುಣ್‌ ತೇಜಪಾಲ್ ವಿರುದ್ಧದ‌ ಅತ್ಯಾಚಾರ ಪ್ರಕರಣ: ಏ.27ಕ್ಕೆ ತೀರ್ಪು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 7:09 IST
Last Updated 24 ಮಾರ್ಚ್ 2021, 7:09 IST
ತರುಣ್‌ ತೇಜಪಾಲ್‌
ತರುಣ್‌ ತೇಜಪಾಲ್‌   

ಪಣಜಿ: ತೆಹಲ್ಕಾ ನಿಯತಕಾಲಿಕೆ ಮಾಜಿ ಪ್ರಧಾನ ಸಂಪಾದಕ ತರುಣ್‌ ತೇಜಪಾಲ್‌ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಗೋವಾದ ಮಾಪುಸಾದ ಸೆಷನ್ಸ್ ಕೋರ್ಟ್ ಏಪ್ರಿಲ್‌ 27ರಂದು ತೀರ್ಪು ನೀಡಲಿದೆ.

2013ರಲ್ಲಿ ಗೋವಾದ ಪಂಚತಾರಾ ಹೋಟೆಲ್‌ನ ಲಿಫ್ಟ್‌ನೊಳಗೆ ತರುಣ್‌ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದುಮಹಿಳಾಸಹೋದ್ಯೋಗಿಯೊಬ್ಬರು ಆರೋಪಿಸಿದ್ದರು.

ಮಾರ್ಚ್‌ 8ರಂದು ತೇಜಪಾಲ್‌ ಪ್ರಕರಣದಲ್ಲಿ ಅಂತಿಮ ವಾದವನ್ನು ಆಲಿಸಿದ ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶೆ ಕ್ಷಮಾ ಜೋಶಿ ಅವರು ಏಪ್ರಿಲ್‌ 27ರಂದು ಪ್ರಕರಣದ ತೀರ್ಪು ನೀಡುವುದಾಗಿ ಹೇಳಿದ್ದಾರೆ.

ADVERTISEMENT

ಈ ಬಗ್ಗೆ ತನಿಖಾ ಅಧಿಕಾರಿ ಸುನಿತಾ ಸಾವಂತ್‌ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದರು. ಗೋವಾ ಅಪರಾಧ ವಿಭಾಗವು ಫೆಬ್ರುವರಿ, 2014ರಲ್ಲಿ ತೇಜಪಾಲ್‌ ವಿರುದ್ಧ 2,846 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.