ಸಾವು
(ಪ್ರಾತಿನಿಧಿಕ ಚಿತ್ರ)
ಕೋಲ್ಕತ್ತ: ಕ್ರಾಂತಿಕಾರಿ ಕವಿ, ರಾಜಕೀಯ ಚಿಂತಕ, ನಕ್ಸಲ್ ನಾಯಕ ಅಜೀಜುಲ್ ಹಕ್ (83) ಸೋಮವಾರ ನಿಧನರಾದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಮನೆಯಲ್ಲಿ ಬಿದ್ದು ಕೈಮುರಿದುಕೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯಾಹ್ನ 2.28ಕ್ಕೆ ಕೊನೆಯುಸಿರೆಳೆದರು ಎಂದು ಮೂಲಗಳು ಹೇಳಿವೆ.
1942ರಲ್ಲಿ ಹೌರಾದಲ್ಲಿ ಜನಿಸಿದ್ದ ಹಕ್, ಭಾರತದ ನಕ್ಸಲ್ ದಂಗೆಯ ಕೊನೆಯ ನಾಯಕರಲ್ಲಿ ಒಬ್ಬರು. ಸಿಪಿಐ(ಎಂಎಲ್)ನ ಎರಡನೇ ಕೇಂದ್ರ ಸಮಿತಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಅವರ ನಿಧನದಿಂದಾಗಿ 1960 ಹಾಗೂ 70ರ ದಶಕದಲ್ಲಿ ರಾಷ್ಟ್ರವನ್ನು ಬೆಚ್ಚಿ ಬೀಳಿಸಿದ್ದ, ಪಶ್ಚಿಮ ಬಂಗಾಳದ ಪ್ರಕ್ಷುಬ್ಧ, ರಕ್ತಸಿಕ್ತ ಅಧ್ಯಾಯದ ಇತಿಹಾಸ ಅಂತ್ಯಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.