ADVERTISEMENT

ಪಠಾಣ್‌ ಸಿನಿಮಾದ ವಿರುದ್ಧ ಪ್ರತಿಭಟನೆ ಹಿಂಪಡೆದ ಗುಜರಾತ್‌ ವಿಎಚ್‌ಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜನವರಿ 2023, 10:23 IST
Last Updated 24 ಜನವರಿ 2023, 10:23 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಅಹಮದಾಬಾದ್‌: ಶಾರುಖ್‌ ಖಾನ್‌ ಅಭಿನಯದ ಪಠಾಣ್‌ ಚಿತ್ರದ ವಿರುದ್ಧ ನಡೆಸುಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿರುವುದಾಗಿ ಗುಜರಾತ್‌ನ ವಿಶ್ವ ಹಿಂದೂ ಪರಿಷತ್‌ ( ವಿಎಚ್‌ಪಿ) ಘಟಕ ಹೇಳಿದೆ.

ಸೆನ್ಸಾರ್‌ ಮಂಡಳಿ ಆಕ್ಷೇಪಾರ್ಹ ಹಾಡಿನ ದೃಶ್ಯ, ಸಂಭಾಷಣೆ ತೆಗೆದು ಹಾಕಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್‌ ಪಡೆಯಲಾಗಿದೆ ಎಂದು ವಿಎಚ್‌ಪಿಯ ಕಾರ್ಯದರ್ಶಿ ಅಶೋಕ್‌ ರಾವಲ್‌ ಹೇಳಿದ್ದಾರೆ.

ಪಠಾಣ್‌ ಸಿನಿಮಾ ವಿರುದ್ಧ ಬುಧವಾರದಿಂದ ನಿರಂತರ ಪ್ರತಿಭಟನೆಗೆ ವಿಎಚ್‌ಪಿ ಉದ್ದೇಶಿಸಿತ್ತು. ಆದರೆ ಸೆನ್ಸಾರ್‌ ಮಂಡಳಿ ಆಕ್ಷೇಪಾರ್ಹ ವಿಷಯಗಳನ್ನು ತೆಗೆದುಹಾಕಿರುವುದರಿಂದ ಬಲ ಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸುವ ಅಗತ್ಯ ಇಲ್ಲ ಎಂದು ಅಶೋಕ್‌ ರಾವಲ್‌ ಹೇಳಿದರು.

ADVERTISEMENT

ಚಿತ್ರದಲ್ಲಿನ ಬೇಶರಮ್‌ ರಂಗ್‌ ಹಾಡು ಸೇರಿದಂತೆ, ಆಕ್ಷೇಪಾರ್ಹ ವಿಷಯಗಳನ್ನು ತೆಗೆದುಹಾಕಲಾಗಿದೆ. ನಾವು ಪ್ರತಿಭಟನೆ ಮಾಡಿದ್ದರಿಂದ ಇದು ಸಾಧ್ಯವಾಗಿದೆ ಎಂದರು.

ಬಜರಂಗದಳ ಕೂಡ ಪ್ರತಿಭಟನೆ ಮಾಡಿತ್ತು, ಇದು ನಮ್ಮ ಎಲ್ಲ ಹಿಂದೂ ಸಂಘಟನೆಗಳ ಗೆಲುವಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.