ADVERTISEMENT

ಬಲಿಷ್ಠ ಕೋಲ್ಕತ್ತ ಪೂರ್ವ ಭಾರತದ ಅಭಿವೃದ್ಧಿಗೆ ಕಾರಣವಾಗಬಹುದು: ಮೋದಿ

ಪಿಟಿಐ
Published 9 ಏಪ್ರಿಲ್ 2021, 14:49 IST
Last Updated 9 ಏಪ್ರಿಲ್ 2021, 14:49 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಪೂರ್ವ ಭಾಗದ ರಾಜ್ಯಗಳು ಅಭಿವೃದ್ಧಿಯಲ್ಲಿ ರಾಷ್ಟ್ರವನ್ನು ಮುನ್ನಡೆಸಿದಾಗ ಭಾರತವು ಐತಿಹಾಸಿಕವಾಗಿ ಸುವರ್ಣ ಯುಗವನ್ನು ಕಾಣುತ್ತದೆ ಎಂದ ಪ್ರಧಾನಿ ನರೇಂದ್ರ ಮೋದಿಯವರು, ತಮ್ಮ ಸರ್ಕಾರವು ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ಗರಿಷ್ಠ ಒತ್ತು ನೀಡಿದೆ ಮತ್ತು ಶಕ್ತಿಯುತ/ಬಲಿಷ್ಠ ಕೋಲ್ಕತ್ತವು ಈ ಅಭಿವೃದ್ಧಿ ಪಥದತ್ತ ಸಾಗಿಸಬಲ್ಲದು ಎಂದು ಪ್ರತಿಪಾದಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಮತ್ತು ಒಡಿಶಾದ ಮೊದಲ ಮುಖ್ಯಮಂತ್ರಿ ಹರೇಕೃಷ್ಣ ಮಹತಾಬ್ ಬರೆದ 'ಒಡಿಶಾ ಇತಿಹಾಸ್' ಪುಸ್ತಕದ ಹಿಂದಿ ಅನುವಾದ ಬಿಡುಗಡೆಯಾದ ಸಂದರ್ಭದಲ್ಲಿ ಮಾತನಾಡಿ, ಕೋಲ್ಕತ್ತ ಶಕ್ತಿಯುತ/ಬಲಿಷ್ಠ ನಗರವಾಗಿ ಹೊರಹೊಮ್ಮುತ್ತಿರುವುದು ನಮ್ಮ ಸರ್ಕಾರದ ಪ್ರಯತ್ನವಾಗಿದ್ದು, ಈ ಮಾರ್ಗಸೂಚಿಯಂತೆ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಭವಿಷ್ಯದ ಮೇಲೆ ಕಣ್ಣಿಟ್ಟಿರುವ ಕೋಲ್ಕತ್ತಾವು ಪಶ್ಚಿಮ ಬಂಗಾಳಕ್ಕೆ ಮಾತ್ರವಲ್ಲದೆ ಅಭಿವೃದ್ಧಿಯಲ್ಲಿ ಇಡೀ ಪೂರ್ವ ಭಾರತಕ್ಕೂ ನಾಯಕತ್ವವನ್ನು ಒದಗಿಸುತ್ತದೆ. ಪೂರ್ವ ಭಾರತವನ್ನು ಅಭಿವೃದ್ಧಿಪಡಿಸುವ ಶಕ್ತಿಯಾಗಿ ಹೊರಹೊಮ್ಮಲು ಸಹಾಯ ಮಾಡಲು, ಕೋಲ್ಕತಾವನ್ನು ಮತ್ತೆ ಕಂಗೊಳಿಸುವಂತೆ ಮಾಡುವುದು ನಮ್ಮ ಪ್ರಯತ್ನವಾಗಿದೆ. ನಾವು ಈ ಮಾರ್ಗಸೂಚಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ' ಎಂದು ಅವರು ಹೇಳಿದರು.

ADVERTISEMENT

ಇಡೀ ಪೂರ್ವ ಭಾರತ ಅಂದರೆ ಬಿಹಾರ, ಒಡಿಶಾ, ಬಂಗಾಳ, ಅಸ್ಸಾಂ ಅಥವಾ ಇತರ ಈಶಾನ್ಯ ರಾಜ್ಯಗಳು ಅಪಾರ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ಹೊಂದಿವೆ. ಪಶ್ಚಿಮ ಭಾರತದೊಂದಿಗಿನ ಅದರ ಅಭಿವೃದ್ಧಿ ಅಂತರವನ್ನು ನಿವಾರಿಸಲು ಇಲ್ಲಿನ ಮೂಲಸೌಕರ್ಯ ಮತ್ತು ಉದ್ಯಮವನ್ನು ಹೆಚ್ಚಿಸಲು ತಮ್ಮ ಸರ್ಕಾರ ಕೆಲಸ ಮಾಡಿದೆ ಎಂದು ಅವರು ಹೇಳಿದರು.

ಈ ಪ್ರದೇಶವು ಭಾರತವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ತಲುಪಿಸಲು ಸಹಾಯ ಮಾಡುತ್ತದೆ. ತಮ್ಮ ಸರ್ಕಾರವು ಸಾವಿರಾರು ಕಿ.ಮೀ ಹೆದ್ದಾರಿಗಳು, ಬಂದರುಗಳನ್ನು ಸಂಪರ್ಕಿಸುವ ಕರಾವಳಿ ಹೆದ್ದಾರಿಗಳು, ಒಡಿಶಾದಲ್ಲಿ ನೂರಾರು ಕಿ.ಮೀ ರೈಲು ಮಾರ್ಗಗಳನ್ನು ನಿರ್ಮಿಸುತ್ತಿದೆ ಮತ್ತು ತೈಲ-ಅನಿಲ ಹಾಗೂ ಉಕ್ಕಿನ ಉದ್ಯಮ ಸೇರಿ ಇತರ ಕ್ಷೇತ್ರದಲ್ಲಿ ಹೂಡಿಕೆಯನ್ನು ತಂದಿದೆ. ಕೌಶಲ್ಯವನ್ನು ಹೆಚ್ಚಿಸಲು ಐಐಟಿಗಳು ಸೇರಿದಂತೆ ವೃತ್ತಿಪರ ಸಂಸ್ಥೆಗಳನ್ನು ತೆರೆಯಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.