ADVERTISEMENT

ನೌಕಾದಳದ ಉಪ ಮುಖ್ಯಸ್ಥರಾಗಿ ತ್ರಿಪಾಠಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 16:12 IST
Last Updated 4 ಜನವರಿ 2024, 16:12 IST
ನೌಕಾದಳದ ನೂತನ ಉಪ ಮುಖ್ಯಸ್ಥರಾದ ವೈಸ್‌ ಅಡ್ಮಿರಲ್‌ ದಿನೇಶ್‌ ಕೆ. ತ್ರಿಪಾಠಿ ಅವರು ಗುರುವಾರ ಗೌರವ ವಂದನೆ ಸ್ವೀಕರಿಸಿದರು – ಪಿಟಿಐ ಚಿತ್ರ
ನೌಕಾದಳದ ನೂತನ ಉಪ ಮುಖ್ಯಸ್ಥರಾದ ವೈಸ್‌ ಅಡ್ಮಿರಲ್‌ ದಿನೇಶ್‌ ಕೆ. ತ್ರಿಪಾಠಿ ಅವರು ಗುರುವಾರ ಗೌರವ ವಂದನೆ ಸ್ವೀಕರಿಸಿದರು – ಪಿಟಿಐ ಚಿತ್ರ   

ನವದೆಹಲಿ: ವೈಸ್‌ ಅಡ್ಮಿರಲ್‌ ದಿನೇಶ್‌ ಕೆ. ತ್ರಿಪಾಠಿ ಅವರು ನೌಕಾದಳದ ಉಪ ಮುಖ್ಯಸ್ಥರಾಗಿ ಗುರುವಾರ ಅಧಿಕಾರ ಸ್ವೀಕರಿಸಿದರು. ಇಲ್ಲಿಯವರೆಗೂ ಉಪ ಮುಖ್ಯಸ್ಥರಾಗಿದ್ದ ಎಸ್‌.ಜೆ.ಸಿಂಗ್‌ ಅವರು ಪಶ್ಚಿಮ ವಿಭಾಗದ ಮುಖ್ಯ ಕಮಾಂಡರ್‌ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.  

ತ್ರಿಪಾಠಿ ಅವರು ಇದಕ್ಕೂ ಮುನ್ನ ಪಶ್ಚಿಮ ವಿಭಾಗದ ಮುಖ್ಯ ಕಮಾಂಡರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಖಡಕ್ವಾಸ್ಲಾದ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯ ಹಳೆಯ ವಿದ್ಯಾರ್ಥಿ ಆಗಿರುವ ಅವರು, 1985ರ ಜುಲೈ 1ರಿಂದ ಭಾರತೀಯ ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಸಂವಹನ ಮತ್ತು ಎಲೆಕ್ಟ್ರಾನಿಕ್‌ ಯುದ್ಧ ತಜ್ಞರೂ ಆಗಿರುವ ಅವರು, ನೌಕಾಪಡೆಯು ಮುಂಚೂಣಿ ಯುದ್ಧ ನೌಕೆಗಳಲ್ಲಿ ಸಿಗ್ನಲ್ ಸಂವಹನ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.  ಅವರು ಭಾರತೀಯ ನೌಕಾ ಹಡಗುಗಳಾದ ವಿನಾಶ್‌, ಕಿರ್ಚ್‌ ಮತ್ತು ತ್ರಿಶೋಲ್‌ಗೆ ಕಮಾಂಡರ್‌ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ADVERTISEMENT

ಸಂಜಯ್‌ ಜೆ ಸಿಂಗ್‌ ಅವರು ಪುಣೆಯ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯಿಂದ ಪದವಿ ಪಡೆದಿದ್ದಾರೆ. ಅವರು 1986ರಲ್ಲಿ ನೌಕಾದಳದ ಕಾರ್ಯ ನಿರ್ವಾಹಕ ಶಾಖೆಯಲ್ಲಿ ಸೇವೆ ಆರಂಭಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.