
ಸಿ.ಪಿ.ರಾಧಾಕೃಷ್ಣನ್
ನವದೆಹಲಿ: ಗುಜರಾತ್, ದೇಶಕ್ಕೆ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ, ನರೇಂದ್ರ ಮೋದಿ ಎನ್ನುವ ಮೂರು ಮಹಾನ್ ವ್ಯಕ್ತಿಗಳು ನೀಡಿದೆ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದ್ದಾರೆ.
ಇಲ್ಲಿನ ಐತಿಹಾಸಿಕ ಗಾಂಧಿ ಆಶ್ರಮದಲ್ಲಿ ಹರಿಜನ ಸೇವಕ ಸಂಘಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಒಬ್ಬ ವ್ಯಕ್ತಿಯು ಒಳ್ಳೆಯವನೋ ಕೆಟ್ಟವನೋ ಎಂಬುದನ್ನು ಅವನ ಸ್ವಭಾವ ನಿರ್ಧರಿಸುತ್ತದೆ ಹೊರತು ಹುಟ್ಟಿನಿಂದಲ್ಲ ಎಂದು ರಾಧಾಕೃಷ್ಣನ್ ತಿಳಿಸಿದ್ದಾರೆ.
ತಮ್ಮನ್ನು ರೂಪಿಸುವ ಸಮಾಜದ ಪಾತ್ರದ ಬಗ್ಗೆ ವ್ಯಕ್ತಿ ಕಡೆಗಣಿಸುತ್ತಾನೆ. ಅದೇ ರೀತಿ ಪ್ರತಿಯೊಬ್ಬ ವ್ಯಕ್ತಿಯು ಸಮಾಜಕ್ಕೆ ಹಿಂದಿರುಗಿಸುವ ಕರ್ತವ್ಯದ ಬಗ್ಗೆ ಅಸಡ್ಡೆ ತೋರುತ್ತಾನೆ. ಸಮಾಜಕ್ಕೆ ಸೇವೆ ಸಲ್ಲಿಸುವುದು ಎಲ್ಲರ ಹೊಣೆಗಾರಿಕೆ ಎಂದು ಅವರು ಒತ್ತಿ ಹೇಳಿದ್ದಾರೆ.
ದೇಶಕ್ಕೆ ಗುಜರಾತ್ ನೀಡಿದ ಕೊಡುಗೆಗಳನ್ನು ರಾಧಾಕೃಷ್ಣನ್ ಶ್ಲಾಘಿಸಿದರು. ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿ, ರಾಷ್ಟ್ರೀಯ ಏಕತೆಗಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ದೇಶದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.