ADVERTISEMENT

Vice President Elections: ಉಪರಾಷ್ಟ್ರಪತಿ ಚುನಾವಣೆಯ ವಿಶೇಷತೆಗಳು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 16:04 IST
Last Updated 9 ಸೆಪ್ಟೆಂಬರ್ 2025, 16:04 IST
<div class="paragraphs"><p>ಮತದಾನ ಮಾಡಿದ ಎಚ್‌.ಡಿ ದೇವೇಗೌಡ</p></div>

ಮತದಾನ ಮಾಡಿದ ಎಚ್‌.ಡಿ ದೇವೇಗೌಡ

   
  • ಪ್ರಧಾನಿ ನರೇಂದ್ರ ಮೋದಿ ಅವರೇ ಮೊದಲಿಗರಾಗಿ ಮತ ಚಲಾಯಿಸಿದರು. ಆ ನಂತರ ಕೇಂದ್ರ ಸಚಿವರು ಲೋಕಸಭೆ ರಾಜ್ಯಸಭೆ ಸದಸ್ಯರು ಮತದಾನ ಮಾಡಿದರು

  • ಮಾಜಿ ಪ್ರಧಾನಿ ರಾಜ್ಯಸಭೆ ಸದಸ್ಯ ಎಚ್‌.ಡಿ.ದೇವೇಗೌಡ ಅವರು ಗಾಲಿ ಕುರ್ಚಿಯಲ್ಲಿ ಬಂದು ಮತ ಚಲಾಯಿಸಿದರು

    ADVERTISEMENT
  • ಜಮ್ಮು ಮತ್ತು ಕಾಶ್ಮೀರ ಕ್ಷೇತ್ರದ ಲೋಕಸಭಾ ಸದಸ್ಯ ಎಂಜಿನಿಯರ್‌ ರಶೀದ್‌ ಅವರು ಜೈಲಿನಿಂದ ಅನುಮತಿ ಪಡೆದು ಬಂದು ಮತ ಚಲಾಯಿಸಿದರು. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಅಡಿ ಅವರನ್ನು ಎನ್‌ಐಎ 2019ರಲ್ಲಿ ಬಂಧಿಸಿತ್ತು. ಆಗಿನಿಂದ ಅವರು ತಿಹಾರ್‌ ಜೈಲಿನಲ್ಲಿದ್ದಾರೆ’

ಅಮಾನ್ಯ ಮತಗಳು

ಈ ಬಾರಿಯ ಚುನಾವಣೆಯಲ್ಲಿ ಒಟ್ಟು 15 ಮತಗಳು ಅಮಾನ್ಯಗೊಂಡಿವೆ. 2017 ಮತ್ತು 2022ರ ಚುನಾವಣೆಯಲ್ಲಿ ಕ್ರಮವಾಗಿ 11 ಮತ್ತು 15 ಮತಗಳು ಅಮಾನ್ಯವಾಗಿದ್ದವು. 1997ರಲ್ಲಿ ಅತ್ಯಧಿಕ ಅಂದರೆ 46 ಮತಗಳು ಅಮಾನ್ಯಗೊಂಡಿದ್ದವು.

‘ಪಿತೃಪಕ್ಷ’ದ ವೇಳೆ ಚುನಾವಣೆ: ಶಿವಸೇನಾ ಕಿಡಿ

ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಪಿತೃಪಕ್ಷದಲ್ಲಿ (ಅಶುಭ ಸಮಯ ಎಂದು ಪರಿಗಣಿಸಲಾಗುತ್ತದೆ) ನಡೆಸಿದ್ದಕ್ಕಾಗಿ ಶಿವಸೇನಾ (ಯುಬಿಟಿ) ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದೆ. ರಾಧಾಕೃಷ್ಣನ್‌ ಅವರು ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತ ಮತ್ತು ಕಟ್ಟಾ ಹಿಂದುತ್ವವಾದಿ. ಆದರೆ ಅವರ ಆಯ್ಕೆಗೆ ನಿಗದಿಪಡಿಸಿದ ಸಮಯ ಆಶ್ಚರ್ಯ ಉಂಟು ಮಾಡಿದೆ ಎಂದು ಅದು ಟೀಕಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.