ADVERTISEMENT

ಮೂತ್ರ ವಿಸರ್ಜನೆ ವಿಡಿಯೊ: ಪ್ರತಿಕ್ರಿಯಿಸಿದ ದೆಹಲಿ ಮೆಟ್ರೊ

ಪಿಟಿಐ
Published 6 ನವೆಂಬರ್ 2022, 10:14 IST
Last Updated 6 ನವೆಂಬರ್ 2022, 10:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದೆಹಲಿ: ಮೆಟ್ರೊ ಸ್ಟೇಷನ್‌ ಪ್ಲಾಟ್‌ಫಾರ್ಮ್‌ ಮೇಲೆ ನಿಂತು ವ್ಯಕ್ತಿಯೊಬ್ಬ ಹಳಿಗಳ ಮೇಲೆ ಮೂತ್ರ ವಿಸರ್ಜಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

‘ದೆಹಲಿ ಮೆಟ್ರೊ ಆವರಣ ಸ್ವಚ್ಛತೆಗೆ ಜನಪ್ರಿಯ ಮತ್ತು ಆವರಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಉಗುಳುವಿಕೆಯಂತಹ ಯಾವುದೇ ಅಶಿಸ್ತಿನ ಚಟುವಟಿಕೆಗೆ ದಂಡ ವಿಧಿಸಲಾಗುತ್ತದೆ’ ಎಂದು ಮೆಟ್ರೊ ಅಧಿಕಾರಿಗಳು ಹೇಳಿದ್ದಾರೆ.

ದಿನಾಂಕವಿಲ್ಲದ ವಿಡಿಯೊ ಕೆಲವು ದಿನಗಳ ಹಿಂದೆ ಟ್ವಿಟರ್‌ನಲ್ಲಿ ಕಾಣಿಸಿಕೊಂಡಿದ್ದು, ‘ಬಹುಶಃ ಇದು ದೆಹಲಿ ಮೆಟ್ರೋದಲ್ಲಿ ಮೊದಲ ಸಲ ಸಂಭವಿಸಿರಬಹುದು’ ಎಂಬ ಶೀರ್ಷಿಕೆಯೊಂದಿಗೆ ಅದನ್ನು ಬಳಕೆದಾರರೊಬ್ಬರು ಹಂಚಿಕೊಂಡಿದ್ದರು.

ADVERTISEMENT

ಕ್ಯಾಮೆರಾದಲ್ಲಿ ಕೃತ್ಯವನ್ನು ಚಿತ್ರೀಕರಿಸುತ್ತಿದ್ದ ವ್ಯಕ್ತಿ, ‘ನೀವು ಎಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದೀರಿ? ನೀವು ಏನು ಮಾಡುತ್ತಿದ್ದೀರಿ?’ ಎಂದು ಹೇಳುವುದನ್ನು ಕೇಳಬಹುದು, ಅದಕ್ಕೆ ಅಪರಾಧಿ ‘ಹೋ ಗಯಾ, ಝ್ಯಾದಾ ಹೋ ಗಯಾ(ಇದು ಹೆಚ್ಚಾಯಿತು)’ಎಂದು ಉತ್ತರಿಸುತ್ತಾನೆ.

ದೆಹಲಿ ಮುಖ್ಯಮಂತ್ರಿಗಳ ಕಚೇರಿ ಮತ್ತು ದೆಹಲಿ ಮೆಟ್ರೊ ರೈಲ್‌ ಕಾರ್ಪೊರೇಷನ್‌ ಅನ್ನು ಈ ವಿಡಿಯೊದಲ್ಲಿ ಟ್ಯಾಗ್‌ ಮಾಡಲಾಗಿತ್ತು.
‘ವ್ಯವಸ್ಥೆಯಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಪ್ರಯಾಣಿಕರಿಗೆ ಸಲಹೆ ನೀಡಲಾಗುತ್ತದೆ. ಪ್ರಯಾಣಿಕರ ಬಳಕೆಗಾಗಿ ನಿಲ್ದಾಣದಲ್ಲಿ ಶೌಚಾಲಯಗಳನ್ನು ಒದಗಿಸಲಾಗಿದೆ’ಎಂದು ದೆಹಲಿ ಮೆಟ್ರೋದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಈ ರೀತಿ ಯಾವುದೇ ಕೃತ್ಯ ಕಂಡುಬಂದಲ್ಲಿ ಪ್ರಯಾಣಿಕರು ಹತ್ತಿರದ ಡಿಎಂಆರ್‌ಸಿ ಅಧಿಕಾರಿಯನ್ನು ಅಥವಾ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ಆಗ ತಕ್ಷಣ ಕ್ರಮ ತೆಗೆದುಕೊಳ್ಳಲು ಸಾಧ್ಯ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.