ADVERTISEMENT

ಮಲ್ಯ ಹಸ್ತಾಂತರ: ಇಂದು ಮಹತ್ವದ ವಿಚಾರಣೆ

ಪಿಟಿಐ
Published 9 ಡಿಸೆಂಬರ್ 2018, 20:00 IST
Last Updated 9 ಡಿಸೆಂಬರ್ 2018, 20:00 IST
ವಿಜಯ ಮಲ್ಯ
ವಿಜಯ ಮಲ್ಯ   

ಲಂಡನ್/ನವದೆಹಲಿ: ಉದ್ಯಮಿ ವಿಜಯ ಮಲ್ಯ ಹಸ್ತಾಂತರ ಪ್ರಕರಣದ ಮಹತ್ವದ ವಿಚಾರಣೆ ಇಲ್ಲಿನ ವೆಸ್ಟ್‌ ಮಿನ್‌ಸ್ಟರ್ ಕೋರ್ಟ್‌ನಲ್ಲಿ ಸೋಮವಾರ ನಡೆಯಲಿದ್ದು, ತೀರ್ಪು ಪ್ರಕಟವಾಗುವ ಸಾಧ್ಯತೆಯಿದೆ.

ಭಾರತದ ಬ್ಯಾಂಕ್‌ಗಳಿಗೆ ಸುಮಾರು ₹9 ಸಾವಿರ ಕೋಟಿ ಕೋಟಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪಗಳು ಮಲ್ಯ ಮೇಲಿದೆ.

ಮಹತ್ವದ ಕೋರ್ಟ್ ವಿಚಾರಣೆಯಲ್ಲಿ ಭಾಗಿಯಾಗುವ ಸಲುವಾಗಿ ಸಿಬಿಐ ಜಂಟಿ ನಿರ್ದೇಶಕ ಎಸ್. ಸಾಯಿ ಮನೋಹರ್ ಅವರು ಭಾನುವಾರ ಲಂಡನ್‌ಗೆ ತೆರಳಿದರು.

ADVERTISEMENT

ಕಡ್ಡಾಯ ರಜೆಯ ಮೇಲೆ ತೆರಳಿರುವ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನಾ ಅವರ ಬದಲಾಗಿ ಸಾಯಿ ಮನೋಹರ್ ಅವರು ಲಂಡನ್‌ನಲ್ಲಿ ನಡೆಯುವ ಕೋರ್ಟ್ ವಿಚಾರಣೆ ವೇಳೆ ಹಾಜರಿರಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.