
ಪಿಟಿಐ
ಪಿಟಿಐ
ಚೆನ್ನೈ: ಕರೂರಿನಲ್ಲಿ ನಡೆದಿದ್ದ ಕಾಲ್ತುಳಿತ ಘಟನೆಯ ಬಳಿಕ ಟಿವಿಕೆ ಮುಖ್ಯಸ್ಥ, ನಟ ವಿಜಯ್ ಅವರು ಭಾನುವಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, 2026ರ ಚುನಾವಣೆಗಾಗಿ ಎರಡು ತಿಂಗಳ ಬಳಿಕ ಪ್ರಚಾರವನ್ನು ಮತ್ತೊಮ್ಮೆ ಆರಂಭಿಸಿದರು.
ಕಾಂಚಿಪುರಂ ಜಿಲ್ಲೆಯ ಸುಂಗುವರ್‌ಛತ್ರಂನ ಕಾಲೇಜೊಂದರ ಸಭಾಂಗಣದಲ್ಲಿ ಭಾನುವಾರ ಕಾರ್ಯಕ್ರಮ ನಡೆಯಿತು.
‘ನನ್ನ ಪಕ್ಷದ ಸಿದ್ಧಾಂತದ ಬಗ್ಗೆ ಡಿಎಂಕೆ ಪ್ರಶ್ನಿಸುತ್ತದೆ. ಆದರೆ, ಲೂಟಿ ಮಾಡುವುದೇ ಆ ಪಕ್ಷದ ಸಿದ್ಧಾಂತ ಮತ್ತು ಕುಟುಂಬ ರಾಜಕಾರಣದಲ್ಲಿ ಅದು ತೊಡಗಿದೆ. ನನ್ನ ಪಕ್ಷಕ್ಕೆ ಗಟ್ಟಿಯಾದ ಸಿದ್ಧಾಂತದ ತಳಹದಿ ಇದೆ. ಸಮಾನತೆಯ ತತ್ವವಿದೆ’ ಎಂದು ಹೇಳಿದರು. ಜಾತಿವಾರು ಜನ ಗಣತಿಗೆ ವಿಜಯ್ ಬೆಂಬಲ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.