ADVERTISEMENT

ವಿಚಾರಣಾ ಆಯೋಗದಿಂದ ಸದಸ್ಯರನ್ನು ಕೈಬಿಡಲು ‘ಸುಪ್ರೀಂ’ ನಕಾರ

ವಿಕಾಸ್‌ ದುಬೆ ಎನ್‌ಕೌಂಟರ್‌ ಪ್ರಕರಣ

ಪಿಟಿಐ
Published 28 ಜುಲೈ 2020, 11:34 IST
Last Updated 28 ಜುಲೈ 2020, 11:34 IST
ಎಸ್‌.ಎ. ಬೊಬಡೆ
ಎಸ್‌.ಎ. ಬೊಬಡೆ   

ನವದೆಹಲಿ:ರೌಡಿಶೀಟರ್‌ ವಿಕಾಸ್‌ ದುಬೆ ಎನ್‌ಕೌಂಟರ್‌ ಬಗ್ಗೆ ತನಿಖೆ ನಡೆಸಲು ರಚಿಸಲಾಗಿರುವ ವಿಚಾರಣಾ ಆಯೋಗದಿಂದ ನಿವೃತ್ತ ನ್ಯಾಯಮೂರ್ತಿ ಶಶಿಕಾಂತ್‌ ಅಗರವಾಲ್‌ ‌ ಮತ್ತು ಉತ್ತರ ಪ್ರದೇಶದ ನಿವೃತ್ತ ಪೊಲೀಸರ ಮಹಾ ನಿರ್ದೇಶಕ ಕೆ.ಎಲ್‌ ಗುಪ್ತಾ ಅವರನ್ನು ಕೈಬಿಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ಅರ್ಜಿ ಸಂಬಂಧ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠವು ಅರ್ಜಿದಾರರಿಗೆ ವಿಚಾರಣಾ ಆಯೋಗದ ಸದಸ್ಯರ ಮೇಲೆ ಆಕ್ಷೇಪ ವ್ಯಕ್ತಪಡಿಸಲು ಅನುಮತಿ ಇಲ್ಲ ಎಂದು ಹೇಳಿದೆ.

ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಈ ಆಯೋಗದಲ್ಲಿ ಇದ್ದಾರೆ. ಹಾಗಾಗಿ ಆಯೋಗದ ಸದಸ್ಯರನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ADVERTISEMENT

ಆಯೋಗದ ಸದಸ್ಯರನ್ನು ತೆಗೆಯುವಂತೆ ಕೋರಿಗನ್ಶಾಮ್‌ ಉಪಾಧ್ಯಾಯ ಮತ್ತು ಅನೂಪ್‌ ಪ್ರಕಾಶ್‌ ಅವಸ್ಥಿ ಎಂಬುವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.