ADVERTISEMENT

ಚಂದ್ರನ ಮೈಲ್ಮೈನ ಅಡೆತಡೆಗಳಿಂದಲೂ ಸಂಪರ್ಕ ಸಾಧ್ಯವಾಗದಿರಬಹುದು: ಮೈಲಸ್ವಾಮಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 4:31 IST
Last Updated 9 ಸೆಪ್ಟೆಂಬರ್ 2019, 4:31 IST
   

ಚೆನ್ನೈ: ಚಂದ್ರನ ಅಧ್ಯಯನಕ್ಕಾಗಿ ರವಾನಿಸಲಾಗಿದ್ದ ವಿಕ್ರಮ್‌ ಹೆಸರಿನ ಲ್ಯಾಂಡರ್‌ ಪತ್ತೆಯಾಗಿದೆಯಾದರೂ, ಅದರ ಸಂಪರ್ಕ ಈ ವರೆಗೆ ಸಾಧ್ಯವಾಗಿಲ್ಲ. ಏಕೆ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆ ವಿಜ್ಞಾನಿಗಳಿಂದಲೂ ಈ ವರೆಗೆ ಯಾವುದೇ ಅಧಿಕೃತ ಸ್ಪಷ್ಟನೆಯೂ ಸಿಕ್ಕಿಲ್ಲ. ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಚಂದ್ರಯಾನ–1ರ ನಿರ್ದೇಶಕ ಮೈಲಸ್ವಾಮಿ ಅಣ್ಣಾದೊರೆ ತಮ್ಮದೇ ವಾದವೊಂದನ್ನು ಮುಂದಿಟ್ಟಿದ್ದಾರೆ.

‘ಚಂದ್ರನ ಮೈಲ್ಮೈನಲ್ಲಿ ಎದುರಾಗಿರುವ ಅಡೆತಡೆಗಳಿಂದಾಗಿ ವಿಕ್ರಮ್‌ ಲ್ಯಾಂಡರ್‌ನ ಸಂಪರ್ಕ ಕಡಿತಗೊಂಡಿದೆ,’ ಎಂದು ಅವರು ಹೇಳಿದ್ದಾರೆ.

‘ಚಂದ್ರನಲ್ಲಿ ಲ್ಯಾಂಡರ್‌ ಇಳಿದಿರುವುದನ್ನು ನಾವು ಪತ್ತೆ ಮಾಡಿದ್ದೇವೆ. ಅದರಂತೆ ನಾವೀಗ ಅದರೊಂದಿಗೆ ಸಂಪರ್ಕ ಸಾಧಿಸಬೇಕಾಗಿದೆ. ಸದ್ಯ ವಿಕ್ರಮ್‌ ಇರುವ ಸ್ಥಳವು ಸುರಕ್ಷಿತ ಲ್ಯಾಂಡ್‌ ಆಗಲು ಸೂಕ್ತವಾದ ಪ್ರದೇಶವಾಗಿರಲಿಲ್ಲ ಎಂದು ಅನಿಸುತ್ತಿದೆ. ಅಲ್ಲಿ ಸೃಷ್ಟಿಯಾಗಿರಬಹುದಾದ ಅಡೆತಡೆಗಳು ಲ್ಯಾಂಡರ್‌ನೊಂದಿಗೆ ಸಂಪರ್ಕ ಸಾಧಿಸುವ ನಮ್ಮ ಪ್ರಯತ್ನಗಳಿಗೆ ಹಿನ್ನಡೆ ಉಂಟು ಮಾಡುತ್ತಿವೆ,’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಲ್ಯಾಂಡರ್‌ನೊಂದಿಗೆ ಸಂಪರ್ಕ ಸದ್ಯ ಏಕಮುಖವಾಗಿದೆ.ಅದರೊಂದಿಗೆ ಸಂಪರ್ಕ ಸಾಧಿಸುವುದು ಅತ್ಯಂತ ಸಂಕೀರ್ಣ ಮತ್ತು ನಾಜೂಕಿನ ಕೆಲಸವಾಗಿದೆ. ಅದನ್ನು ನಿಭಾಯಿಸುವಲ್ಲಿ ಇಸ್ರೋದ ವಿಜ್ಞಾನಿಗಳು ಸಮರ್ಥರಿದ್ದಾರೆ,’ ಎಂದೂ ಮೈಲಸ್ವಾಮಿ ಅಣ್ಣಾದೊರೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.