ಲಖನೌ: ರಾಮ್‌ಜಾನಕಿ ದೇವಸ್ಥಾನದ ಸ್ಥಾಪಕ, ಸನ್ಯಾಸಿ ಜೀವನ ನಡೆಸುತ್ತಿರುವ ಸ್ವಾಮಿ ರಾಮ್‌ಕಮಲ್ ದಾಸ್ ಅವರಿಗೆ 50 ಗಂಡು ಮಕ್ಕಳಿದ್ದಾರೆ. ಇವರಿಗೆ 50 ವರ್ಷ ವಯಸ್ಸು. ಮೊದಲ ಮಗ ಬನ್ವಾರಿ ದಾಸ್ ಅವರ ವಯಸ್ಸು 72. ಕೊನೆಯ ಮಗ ರಾಘವೇಂದ್ರ ಅವರಿಗೆ 28!
– ಈ ವಿವರಗಳಿರುವ ವಾರಾಣಸಿ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಹರಿದಾಡುತ್ತಿದೆ. ಈ ಮತದಾರರ ಪಟ್ಟಿಯನ್ನು ಕಾಂಗ್ರೆಸ್ ಹಂಚಿಕೊಂಡಿದೆ.
‘ನೋಡಿ, ಚುನಾವಣಾ ಆಯೋಗದ ಮತ್ತೊಂದು ಚಮತ್ಕಾರ. ಇದೊಂದು ತಪ್ಪು ಉಳಿದಿದೆ ಎಂದು ಆಯೋಗವು ಈ ಪ್ರಕರಣವನ್ನೂ ಮುಚ್ಚಿ ಹಾಕಿಬಿಡುತ್ತದೆಯೋ ಅಥವಾ ವಂಚನೆ ಮಾಡಲಾಗಿದೆ ಎಂದು ಒಪ್ಪಿಕೊಳ್ಳುತ್ತದೆಯೋ’ ಎಂದು ಕಾಂಗ್ರೆಸ್ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಚುನಾವಣಾ ಆಯೋಗವು ಬಿಹಾರದಲ್ಲಿ ನಡೆಸಿದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ‘ಮತ ಕಳ್ಳತನ’ದ ಕುರಿತು ನಡೆಸಿದ ಸುದ್ದಿಗೋಷ್ಠಿ ಬಳಿಕ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆಯೋಗದ ಕಾರ್ಯವಿಧಾನದ ಕುರಿತು ದೊಡ್ಡ ಪ್ರಮಾಣದ ವಿವಾದ ಮತ್ತು ಚರ್ಚೆ ಏರ್ಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.