ADVERTISEMENT

ವಿರಾಟ್ ಕೊಹ್ಲಿ, ಗಂಗೂಲಿ, ತಮನ್ನಾ, ಪ್ರಕಾಶ್ ರಾಜ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್

ಏಜೆನ್ಸೀಸ್
Published 3 ನವೆಂಬರ್ 2020, 15:30 IST
Last Updated 3 ನವೆಂಬರ್ 2020, 15:30 IST
 ವಿರಾಟ್ ಕೊಹ್ಲಿ- ಸೌರವ್ ಗಂಗೂಲಿ
ವಿರಾಟ್ ಕೊಹ್ಲಿ- ಸೌರವ್ ಗಂಗೂಲಿ   

ಚೆನ್ನೈ: ಫ್ಯಾಂಟಸಿ ಸ್ಪೋರ್ಟ್ಸ್ ಆ್ಯಪ್‌ಗಳ ಜಾಹಿರಾತುಗಳನ್ನು ಬೆಂಬಲಿಸಿದ್ದಕ್ಕಾಗಿ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೇರಿದಂತೆ ಹಲವಾರು ಪ್ರಸಿದ್ಧ ವ್ಯಕ್ತಿಗಳಿಗೆ ಮದ್ರಾಸ್ ಹೈಕೋರ್ಟ್‌ನ ಮಧುರೈ ನ್ಯಾಯಪೀಠ ನೋಟಿಸ್ ನೀಡಿದೆ.

ಕೊಹ್ಲಿ ಮತ್ತು ಗಂಗೂಲಿ ಅವರಲ್ಲದೆ, ನಟರಾದ ಪ್ರಕಾಶ್ ರಾಜ್, ತಮನ್ನಾ ಭಾಟಿಯಾ, ರಾಣಾ ಮತ್ತು ಸುದೀಪ್ ಖಾನ್ ಅವರಿಗೂ ನೋಟಿಸ್ ಜಾರಿ ಮಾಡಿದ್ದು, ನವೆಂಬರ್ 19ರೊಳಗೆ ನೋಟಿಸ್‌ಗಳಿಗೆ ಉತ್ತರಿಸುವಂತೆ ಕೋರಲಾಗಿದೆ.

'ಈ ಅಪ್ಲಿಕೇಶನ್‌ಗಳು ಐಪಿಎಲ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್‌ನ ಹೆಸರಿನಲ್ಲಿವೆ ಮತ್ತು ಇನ್ನು ಕೆಲವು ಅಪ್ಲಿಕೇಶನ್‌ಗಳು ರಾಜ್ಯದ ಹೆಸರಿನ ಹೆಸರಿನಲ್ಲಿವೆ. ಈ ತಂಡಗಳು ರಾಜ್ಯದ ಪರವಾಗಿ ಆಡುತ್ತಿದೆಯೇ' ಎಂದು ಕ್ರಿಕೆಟ್ ನೆಕ್ಸ್ಟ್ ನ್ಯಾಯಪೀಠವನ್ನು ಉಲ್ಲೇಖಿಸಿ ಹೇಳಿದೆ.

ADVERTISEMENT

ಅಂತಹ ವೇದಿಕೆಗಳಲ್ಲಿ ಫ್ಯಾಂಟಸಿ ಕ್ರೀಡೆಗಳನ್ನು ಆಡುವಾಗ ಹಣ ಕಳೆದುಕೊಂಡು ಕೆಲವು ಯುವಕರು ಆತ್ಮಹತ್ಯೆ ಮಾಡಿಕೊಂಡ ಆರೋಪದ ಮೇರೆಗೆ ನಂತರ ವಕೀಲ ಮೊಹಮ್ಮದ್ ರಿಜ್ವಿ ಅರ್ಜಿ ದಾಖಲಿಸಿದ್ದರು.

ಮೊಬೈಲ್ ಪ್ರೀಮಿಯರ್ ಲೀಗ್ (ಎಂಪಿಎಲ್) ಜಾಹಿರಾತಿನಲ್ಲಿ ಕೊಹ್ಲಿ ಕಾಣಿಸಿಕೊಂಡರೆ, ಮೈ 11 ಸರ್ಕಲ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಗಂಗೂಲಿ ಕಾಣಿಸಿಕೊಂಡಿದ್ದಾರೆ.

ಎಂಪಿಎಲ್ ಇತ್ತೀಚೆಗೆ ಮೂರು ವರ್ಷಗಳ ಅವಧಿಗೆ ಭಾರತೀಯ ಕ್ರಿಕೆಟ್ ತಂಡದ ಕಿಟ್‌ಗಾಗಿ ಪ್ರಾಯೋಜಕತ್ವದ ಒಪ್ಪಂದವನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. 2006 ರಿಂದ ಬಿಸಿಸಿಐ ಜೊತೆ ಸಂಬಂಧ ಹೊಂದಿ ಕ್ರೀಡಾ ಉಡುಪಿನ ದೈತ್ಯ ನೈಕ್ ಬದಲಿಗೆ ಒಪ್ಪಂದ ಮಾಡಿಕೊಂಡಿದೆ. ಹೊಸ ಒಪ್ಪಂದವು ₹ 120 ಕೋಟಿ ಮೌಲ್ಯದದ್ದಾಗಿದ್ದು, ಮಾರಾಟವಾಗುವ ಪ್ರತಿ ಜರ್ಸಿ ಅಥವಾ ಸರಕುಗಳಿಗೆ 10 ಪ್ರತಿಶತದಷ್ಟು ಆದಾಯದ ಪಾಲನ್ನು ಬಿಸಿಸಿಐ ಕೂಡ ಪಡೆಯುತ್ತದೆ.

ಆನ್‌ಲೈನ್ ಜೂಜಾಟವನ್ನು ಉತ್ತೇಜಿಸಿದ್ದಕ್ಕಾಗಿ ಕೊಹ್ಲಿ ಮತ್ತು ತಮನ್ನಾ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಜುಲೈನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆನ್‌ಲೈನ್‌ ಜೂಜಾಟದಿಂದ ಯುವಕರು ದಾರಿ ತಪ್ಪುತ್ತಿದ್ದಾರೆ. ಈ ಕಾರಣದಿಂದ ಇಂತಹ ಆಪ್‌ಗಳನ್ನು ರದ್ದು ಮಾಡಬೇಕೆಂದು ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.