ADVERTISEMENT

ಅಭಿವೃದ್ಧಿ ಹೊಂದಿದ ರಾಷ್ಟ್ರದ ಕಲ್ಪನೆ ಬರಿ ಕನಸಲ್ಲ; ನಿಶ್ಚಿತ ಗುರಿ: ಧನಕರ್

ಪಿಟಿಐ
Published 5 ಜನವರಿ 2025, 10:55 IST
Last Updated 5 ಜನವರಿ 2025, 10:55 IST
ಜಗದೀಪ್‌ ಧನಕರ್
ಜಗದೀಪ್‌ ಧನಕರ್   

ನವದೆಹಲಿ: 2047ರ ಹೊತ್ತಿಗೆ ಅಭಿವೃದ್ಧಿ ರಾಷ್ಟ್ರವಾಗಬೇಕು ಎಂಬ ಕಲ್ಪನೆಯು ಇನ್ನುಮುಂದೆ ಬರಿ ಕನಸಲ್ಲ. ನಿಶ್ಚಿತ ಗಮ್ಯ (ಗುರಿ) ಆಗಲಿದೆ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಭಾನುವಾರ ಹೇಳಿದ್ದಾರೆ.

ಧನಕರ್‌ ಅವರು, ದೆಹಲಿ ಕಂಟೋನ್ಮೆಂಟ್‌ನಲ್ಲಿ ಎನ್‌ಸಿಸಿ ಗಣರಾಜ್ಯೋತ್ಸವ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದಾರೆ.

ನ್ಯಾಷನಲ್‌ ಕೆಡೆಟ್‌ ಕಾರ್ಪ್ಸ್‌ (ಎನ್‌ಸಿಸಿ) – ದೇಶ ಸೇವಾ ಮನೋಭಾವದೊಂದಿಗೆ ಏಕತೆ ಹಾಗೂ ಶಿಸ್ತಿಗೆ ಹೆಸರುವಾಸಿಯಾದ ಯುವಕರ ಪಡೆಯಾಗಿದೆ ಎಂದು ಶ್ಲಾಘಿಸಿದ್ದಾರೆ.

ADVERTISEMENT

ಕೆಡೆಟ್‌ಗಳನ್ನು ಉದ್ದೇಶಿಸಿ, 'ನೀವು ನಮ್ಮ ಜನಸಂಖ್ಯಾ ಬಲವನ್ನು ಪ್ರತಿನಿಧಿಸುತ್ತೀರಿ. ಇದು, ವಿಶ್ವಕ್ಕೇ ಅಸೂಯೆ ಹುಟ್ಟಿಸಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರ ಕುರಿತ ನಮ್ಮ ಕಲ್ಪನೆಯು ಇನ್ನು ಮುಂದೆ ಬರಿ ಕನಸಲ್ಲ. ಅದು ನಿಶ್ಚಿತ ಗುರಿಯಾಗಿದೆ' ಎಂದಿದ್ದಾರೆ.

'ಭಾರತವು 2047ರ ಹೊತ್ತಿಗೆ ಅಭಿವೃದ್ಧಿ ಸಾಧಿಸಲು ನೀವೆಲ್ಲ ನಿರ್ಣಾಯಕ ಪಾತ್ರ ವಹಿಸಲಿದ್ದೀರಿ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶವು 2047ಕ್ಕೆ 100ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸುವಷ್ಟರಲ್ಲಿ 'ವಿಕಸಿತ ಭಾರತ' ನಿರ್ಮಾಣವಾಗಬೇಕು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಎನ್‌ಸಿಸಿಯ ಒಟ್ಟು 2,361 ಕೆಡೆಟ್‌ಗಳು ಗಣರಾಜ್ಯೋತ್ಸವ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರದ 114 ಹಾಗೂ ಲಡಾಖ್‌ನ 178 ಮಂದಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.