ADVERTISEMENT

ಮೋದಿ ರಚಿತ ಗೀತೆಗೆ ಹೆಜ್ಜೆಹಾಕಿದ ಅಂಧ ಬಾಲಕಿಯರು

ಪಿಟಿಐ
Published 13 ಅಕ್ಟೋಬರ್ 2018, 15:58 IST
Last Updated 13 ಅಕ್ಟೋಬರ್ 2018, 15:58 IST
ಪ್ರಧಾನಿ ನರೇಂದ್ರ ಮೋದಿ ಅವರು 25 ವರ್ಷಗಳ ಹಿಂದೆ ಬರೆದಿದ್ದ ಗೀತೆಗೆ ಅಂಧ ವಿದ್ಯಾರ್ಥಿನಿಯರು ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅವರು 25 ವರ್ಷಗಳ ಹಿಂದೆ ಬರೆದಿದ್ದ ಗೀತೆಗೆ ಅಂಧ ವಿದ್ಯಾರ್ಥಿನಿಯರು ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 25 ವರ್ಷಗಳ ಹಿಂದೆ ಬರೆದಿದ್ದ ಗೀತೆಗೆ ಅಂಧ ವಿದ್ಯಾರ್ಥಿನಿಯರು ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.

ಅಹಮದಾಬಾದ್‌ನ ಅಂಧ ಕನ್ಯಾ ಪ್ರಕಾಶ ಗೃಹದ ವಿದ್ಯಾರ್ಥಿನಿಯರು ಗುಜರಾತಿನ ಸಾಂಪ್ರದಾಯಿಕ ಗರ್ಭಾ ನೃತ್ಯದ ಮೂಲಕ ಗೀತೆಯನ್ನು ಪ್ರಸ್ತುತಪಡಿಸಿದ್ದಾರೆ.

ನವರಾತ್ರಿಗೆ ಶುಭ ಕೋರಿರುವ ಪ್ರಧಾನಿ, ವಿದ್ಯಾರ್ಥಿಗಳ ನೃತ್ಯದ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ಹಾಡಿನ ಸಾಲುಗಳು ಹೀಗಿವೆ

ಗರ್ಭಾ ಗುಜರಾತಿನ ಹೆಮ್ಮೆ../ ಸಮಾಜದ ಎಲ್ಲರಿಗೂ ಇದು ಸಂತಸ ಹೊತ್ತು ತರುತ್ತದೆ../ ಇದು ಅಭಿವೃದ್ಧಿಯ ಸಂಕೇತ../ ಗರ್ಭಾ ಕೊಳಲು ಇದ್ದಂತೆ../ ಇದು ನವಿಲುಗರಿ ಇದ್ದಂತೆ../ ಗರ್ಭಾ ಸತ್ಯದ ಸಂಕೇತ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.