ADVERTISEMENT

ವಿಶ್ವಭಾರತಿ ಪ್ರಾಧ್ಯಾಪಕ ವಜಾ: ಶಿಕ್ಷಣ ತಜ್ಞರಿಂದ ಪತ್ರ ರಾಷ್ಟ್ರಪತಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 15:40 IST
Last Updated 11 ಜನವರಿ 2023, 15:40 IST

ಕೋಲ್ಕತ್ತ: ವಿಶ್ವಭಾರತಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಸುದೀಪ್ತಾ ಭಟ್ಟಾಚಾರ್ಯ ಅವರನ್ನು ಸೇವೆಯನ್ನು ವಜಾಗೊಳಿಸಿದ್ದರ ಕುರಿತು ಖ್ಯಾತ ಭಾಷಾತಜ್ಞ ನೋಮ್‌ ಚೋಮ್ಸ್ಕಿ ಸೇರಿ 250 ಶಿಕ್ಷಣ ತಜ್ಞರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಮುರ್ಮು ಅವರನ್ನು ಕೋರಿದ್ದಾರೆ.

ಜನವರಿ 9ಕ್ಕೆ ಈ ಪತ್ರ ಬರೆದಿದ್ದಾರೆ. ಭಟ್ಟಾಚಾರ್ಯ ಅವರು ಹಲವಾರು ಸಂದರ್ಭಗಳಲ್ಲಿ ದುರ್ನಡತೆ ತೋರಿದ್ದಾರೆ ಎಂದು ಆರೋಪಿಸಿರುವ ವಿ.ವಿಯು ಅವರ ವಿರುದ್ಧ ಸರಿಯಾದ ತನಿಖೆ ನಡೆಸಿಲ್ಲ. ಅವರ ವಿರುದ್ಧ ಶೋಕಾಸ್‌ ನೋಟಿಸ್‌ ಕೂಡಾ ಹೊರಡಿಸಿಲ್ಲ. ಅವರ ವಿರುದ್ಧ ತೆಗೆದುಕೊಂಡಿರುವ ಕ್ರಮವು ನ್ಯಾಯಸಮ್ಮತವಲ್ಲ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಈ ಪತ್ರದ ಕುರಿತು ವಿಶ್ವಭಾರತಿ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ADVERTISEMENT

ಈ ಪತ್ರದ ಪ್ರತಿಯು ಪಿಟಿಐ ಸುದ್ದಿಸಂಸ್ಥೆಗೆ ದೊರಕಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.