ADVERTISEMENT

'ಐಶ್ವರ್ಯಾ ಮೀಮ್'- ಕ್ಷಮೆಯಾಚಿಸಿ ಟ್ವೀಟ್ ಡಿಲೀಟ್ ಮಾಡಿದ ವಿವೇಕ್ ಒಬೆರಾಯ್ 

​ಪ್ರಜಾವಾಣಿ ವಾರ್ತೆ
Published 21 ಮೇ 2019, 7:59 IST
Last Updated 21 ಮೇ 2019, 7:59 IST
   

ನವದೆಹಲಿ: ಬಾಲಿವುಡ್ ನಟಿ ಐಶ್ವರ್ಯಾ ರೈ ಜೀವನವನ್ನು ಬಿಂಬಿಸುವ ಮೀಮ್ ಶೇರ್ ಮಾಡಿದ್ದ ನಟ ವಿವೇಕ್ ಒಬೆರಾಯ್ ಆ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಎಕ್ಸಿಟ್ ಪೋಲ್ ಬಗ್ಗೆ ಈ ಮೀಮ್ ಬಳಸಿ ವಿವೇಕ್ ಒಬೆರಾಯ್ ಸೋಮವಾರ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದ ಕಾರಣ ಮಂಗಳವಾರ ಬೆಳಗ್ಗೆ ಟ್ವೀಟ್ ಡಿಲೀಟ್ ಮಾಡಿ ಕ್ಷಮೆ ಕೋರಿದ್ದಾರೆ.

ನನ್ನ ಮೀಮ್ ಯಾವುದಾದರೂ ಮಹಿಳೆಯ ಬಗ್ಗೆ ಆಕ್ಷೇಪಾರ್ಹವಾಗಿದ್ದರೆ ಅದನ್ನು ಪರಿಹರಿಸಬೇಕಾಗಿದೆ, ಕ್ಷಮೆ ಇರಲಿ, ಟ್ವೀಟ್ ಡಿಲೀಟ್ ಮಾಡುತ್ತೇನೆ ಎಂದು ವಿವೇಕ್ ಟ್ವೀಟ್ ಮಾಡಿದ್ದಾರೆ. ಇದಾದ ನಂತರ ಇನ್ನೊಂದು ಟ್ವೀಟ್ ಮಾಡಿದ ಅವರು ನಮಗೆ ತಮಾಷೆಯಾಗಿ ಕಾಣುವುದು ಇನ್ನೊಬ್ಬರಿಗೆ ತಮಾಷೆಯಾಗಿ ಕಾಣಬೇಕಿಂದಿಲ್ಲ. ನಾನು ಕಳೆದ 10 ವರ್ಷಗಳಿಂದ 2000ಕ್ಕಿಂತಲೂ ಹೆಚ್ಚು ಹುಡುಗಿಯರಶ್ರೇಯಾಭಿವೃದ್ಧಿಗಾಗಿ ಸಮಯ ವ್ಯಯಿಸಿದ್ದೇನೆ. ಮಹಿಳೆಯೊಬ್ಬರಿಗೆ ಅಗೌರವ ತೋರುವುದು ನನ್ನಿಂದ ಚಿಂತಿಸಲೂ ಸಾಧ್ಯವಿಲ್ಲ ಎಂದಿದ್ದಾರೆ.

ADVERTISEMENT

ವಿವೇಕ್ಸೋಮವಾರ ಟ್ವೀಟಿಸಿದ ಟ್ವೀಟ್ ಬಗ್ಗೆ ಕ್ಷಮೆ ಕೇಳಬೇಕೆಂದು ನೆಟಿಜನ್‌ಗಳು ಒತ್ತಾಯಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ವಿವೇಕ್ಕ್ಷಮೆ ಕೇಳುವುದಕ್ಕೆ ನನ್ನದೇನೂ ತಕರಾರು ಇಲ್ಲ.ಆದರೆ ನಾನು ಯಾವ ತಪ್ಪು ಮಾಡಿದ್ದೇವೆ ಎಂದು ಹೇಳಿ.ತಪ್ಪು ಮಾಡಿದ್ದರೆ ನಾನು ಕ್ಷಮೆ ಕೇಳುವೆ, ನಾನು ತಪ್ಪು ಮಾಡಿದ್ದೇನೆಎಂದು ಅನಿಸುತ್ತಿಲ್ಲ.ಜನರೇ ಇದನ್ನು ದೊಡ್ಡ ವಿಷಯವನ್ನಾಗಿ ಮಾಡುತ್ತಿದ್ದಾರೆ. ನಾನೊಂದು ತಮಾಷೆಗೆ ನಕ್ಕಿದ್ದೇನೆ. ಟ್ರೋಲ್ ಮಾಡಿದ ವ್ಯಕ್ತಿಯ ಕಲಾತ್ಮಕತೆಗೆ ಅಭಿನಂದನೆ ಹೇಳಿದ್ದೇನೆ. ಆ ಮೀಮ್‌ನಲ್ಲಿರುವ ವ್ಯಕ್ತಿಗಳಿಗೆ ಈ ಬಗ್ಗೆ ಆಕ್ಷೇಪವಿಲ್ಲ, ಬಾಕಿದ್ದವರಿಗೆ ಮಾತ್ರ ಆಕ್ಷೇಪ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.