ADVERTISEMENT

ರಷ್ಯಾ ಅಧ್ಯಕ್ಷ ಪುಟಿನ್‌ ಭೇಟಿ: ದೆಹಲಿಯ ಮೂಲೆ ಮೂಲೆಗಳಲ್ಲೂ ಕಣ್ಣಿಟ್ಟ ಕಾವಲುಪಡೆ

ಪಿಟಿಐ
Published 2 ಡಿಸೆಂಬರ್ 2025, 13:09 IST
Last Updated 2 ಡಿಸೆಂಬರ್ 2025, 13:09 IST
   

ನವದೆಹಲಿ: ರಷ್ಯಾ ಅಧ್ಯಕ್ಷ ವಾದ್ಲಿಮಿರ್‌ ಪುಟಿನ್‌ ಅವರ ಎರಡು ದಿನಗಳ ಭಾರತ ಭೇಟಿಯ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿವಿಧ ಭದ್ರತಾಪಡೆಗಳು ರಕ್ಷಣಾ ವ್ಯವಸ್ಥೆಯನ್ನು ಪರಿಶೀಲಿಸಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಡಿ.4ರಂದು ಪುಟಿನ್‌ ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಮುಖ ಸ್ಥಳಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಪುಟಿನ್‌ ಅವರ ಭಾರತ ಪ್ರವಾಸದ ವೇಳಾಪಟ್ಟಿಯನ್ನು ತಯಾರಿಸಲಾಗಿದೆ. ಆದರೆ, ಪ್ರವಾಸದ ವೇಳೆ ಅವರು ಎಲ್ಲಿ ತಂಗಲಿದ್ದಾರೆ ಎನ್ನುವ ಮಾಹಿತಿಯನ್ನು ಭದ್ರತಾ ಉದ್ದೇಶದಿಂದ ಬಿಡುಗಡೆಗೊಳಿಸಿಲ್ಲ ಎಂದು ಹೇಳಿದ್ದಾರೆ.

ADVERTISEMENT

ಪುಟಿನ್‌ ಅವರು ಭಾರತಕ್ಕೆ ಆಗಮಿಸುವ ವೇಳೆಯಿಂದ ಅವರು ನಿರ್ಗಮಿಸುವ ತನಕ ಅವರ ಪ್ರತಿಯೊಂದು ಚಲನವಲನವನ್ನು ದೆಹಲಿ ಪೊಲೀಸ್‌, ಕೇಂದ್ರ ಭದ್ರತಾ ಪಡೆಗಳು, ಭಯೋತ್ಪಾದಕ ನಿಗ್ರಹದಳ, ರಷ್ಯಾದ ಅಧಿಕಾರಿಗಳು ಸೇರಿದಂತೆ ವಿವಿಧ ಭದ್ರತಾಪಡೆಗಳು ಮೇಲ್ವಿಚಾರಣೆ ಮಾಡಲಿದ್ದಾರೆ. ಟ್ರಾಫಿಕ್‌ನಿಂದ ನೈರ್ಮಲ್ಯೀಕರಣದವರೆಗೆ ಎಲ್ಲಾ ವಿಷಯಗಳಲ್ಲೂ ನಿಗವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಪುಟಿನ್‌ ಭೇಟಿಗೂ ಮುನ್ನ ರಷ್ಯಾದ 50 ಮಂದಿ ಅಧಿಕಾರಿಗಳು ದೆಹಲಿಗೆ ಆಗಮಿಸಲಿದ್ದು, ಭದ್ರತಾ ವ್ಯವಸ್ಥೆಯನ್ನು ಪುನರ್‌ ಪರಿಶೀಲನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.