ADVERTISEMENT

ಮತಗಳ್ಳತನ| ದಾಖಲೆಗಳೊಂದಿಗೆ ಚುನಾವಣಾ ಆಯೋಗಕ್ಕೆ ರಾಹುಲ್ ದೂರು ಸಲ್ಲಿಸಲಿ: ರಾಜನಾಥ

ಪಿಟಿಐ
Published 8 ನವೆಂಬರ್ 2025, 10:05 IST
Last Updated 8 ನವೆಂಬರ್ 2025, 10:05 IST
   

ಸಸಾರಾಮ್(ಬಿಹಾರ): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಮತಗಳ್ಳತನ ಆರೋಪ ಆಧಾರರಹಿತವಾಗಿದೆ. ಅವರ ಬಳಿ ದಾಖಲೆಗಳಿದ್ದರೆ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಶನಿವಾರ ಹೇಳಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಸಸಾರಾಮ್ ಅಲ್ಲಿ ನಡೆದ ರ‍್ಯಾಲಿಯಲ್ಲಿ ಅವರು ಮಾತನಾಡಿದ್ದಾರೆ.

ರಾಹುಲ್‌ ಗಾಂಧಿ ಅವರಿಗೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತಗಳ್ಳತನವಾಗಿದೆ ಎನ್ನುವ ಅನುಮಾನವಿದ್ದರೆ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿ. ಆದರೆ ಅದನ್ನು ಮಾಡುವುದು ಬಿಟ್ಟು, ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ADVERTISEMENT

ಕಾಂಗ್ರೆಸ್‌ ಪಕ್ಷವು ಒಡೆದು ಹಾಳುವ ರಾಜಕೀಯ ಮಾಡುತ್ತಿದೆ. ಅದು ಜಾತಿ, ಧರ್ಮದ ಆಧಾರದಲ್ಲಿ ಜನರನ್ನು ಬೇರ್ಪಡಿಸುತ್ತಿದೆ. ರಾಹುಲ್‌ ಗಾಂಧಿ ಅವರು ರಕ್ಷಣಾ ವಲಯದಲ್ಲಿ ಮೀಸಲಾತಿ ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ನಮ್ಮ ಸೇನೆಯು ಇದೆಲ್ಲಕ್ಕಿಂತ ಮಿಗಿಲು. ಅದರ ಜೊತೆ ರಾಜಕೀಯ ಮಾಡಬಾರದು. ಬಿಜೆಪಿ ಕೂಡ ಮೀಸಲಾತಿ ಪರವಾಗಿದ್ದು, ಬಡವರು ಹಾಗೂ ಅಸಹಾಯಕ ವರ್ಗಕ್ಕೆ ಮೀಸಲಾತಿ ಕಲ್ಪಿಸಿದ್ದೇವೆ ಎಂದಿದ್ದಾರೆ.

ಎನ್‌ಡಿಎ ಸರ್ಕಾರವು ಭಯೋತ್ಪಾದನೆಯ ವಿರೋಧಿಯಾಗಿದೆ. ಭಾರತದ ಮೇಲೆ ಉಗ್ರರು ದಾಳಿಮಾಡಲು ಪ್ರಯತ್ನಿಸಿದರೆ, ಅವರ ವಿರುದ್ಧ ಬಲವಾದ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಭಾರತವು ಬಲಹೀನ ದೇಶವಾಗಿ ಉಳಿದಿಲ್ಲ, ನಾವು ಜಗತ್ತಿನ ಶಕ್ತಿಶಾಲಿ ದೇಶವಾಗಿ ಗುರುತಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.