ADVERTISEMENT

ಎಸ್‌ಐಆರ್‌ ರೋಗ ಎಲ್ಲೆಡೆ ಹರಡದಿರಲಿ: ಕಮಲ್ ಹಾಸನ್ ಕಳವಳ

ಪಿಟಿಐ
Published 4 ಫೆಬ್ರುವರಿ 2026, 16:35 IST
Last Updated 4 ಫೆಬ್ರುವರಿ 2026, 16:35 IST
ಕಮಲ್ ಹಾಸನ್
ಕಮಲ್ ಹಾಸನ್   

ನವದೆಹಲಿ: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಿಂದ (ಎಸ್‌ಐಆರ್‌) ಬಿಹಾರವು ಅನೇಕ ಜೀವಂತ ಸತ್ತವರ ಭೂಮಿಯಾಯಿತು’ ಎಂದು ಎಂಎನ್‌ಎಂ ಪಕ್ಷದ ಮುಖ್ಯಸ್ಥ, ನಟ ಕಮಲ್‌ ಹಾಸನ್‌ ಬುಧವಾರ ರಾಜ್ಯಸಭೆಯಲ್ಲಿ ಹೇಳಿದರು.

ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ‘ಈ ರೋಗವು ದೇಶದಾದ್ಯಂತ ಹರಡುವುದನ್ನು ನಾವು ಬಯಸುವುದಿಲ್ಲ. ಆದರೆ, ಚುನಾವಣಾ ಆಯೋಗವು ಖಂಡಿತವಾಗಿ ಈ ರೋಗದ ಹರಡುವಿಕೆಯನ್ನು ಸುಗಮಗೊಳಿಸುತ್ತದೆ’ ಎಂದರು.

‘ತಮಿಳುನಾಡಿನಲ್ಲಿ ಶೀಘ್ರದಲ್ಲೇ ಸುಮಾರು ಒಂದು ಕೋಟಿ ಜೀವಂತ ಸತ್ತವರು ಕಾಗದದ ಮೇಲೆ ಇರಬಹುದೆಂಬ ಭಯ ನಮ್ಮನ್ನು ಕಾಡುತ್ತಿದೆ. ಆದ್ದರಿಂದ ಜೀವಂತ ಸತ್ತವರನ್ನು ಪುನರುತ್ಥಾನಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.