ADVERTISEMENT

‘ಮದರ್‌ ಇಂಡಿಯಾ’ ಎನ್ನುತ್ತೇವೆ ‘ಫಾದರ್‌ ಇಂಡಿಯಾ’ ಎನ್ನುವುದಿಲ್ಲ-ವೆಂಕಯ್ಯ ನಾಯ್ಡು

ಏಜೆನ್ಸೀಸ್
Published 27 ಜುಲೈ 2019, 9:02 IST
Last Updated 27 ಜುಲೈ 2019, 9:02 IST
ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾತನಾಡಿದರು. ಚಿತ್ರ: ಎಎನ್‌ಐ ಟ್ವೀಟ್‌
ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾತನಾಡಿದರು. ಚಿತ್ರ: ಎಎನ್‌ಐ ಟ್ವೀಟ್‌   

ಮುಂಬೈ:ನಾವು ತಾಯಿ ನಾಡು(‘ಮದರ್‌ ಇಂಡಿಯಾ) ಎಂದು ಕರೆಯುತ್ತೇವೆ. ಬದಲಿಗೆ, ತಂದೆ ನಾಡು(’ಫಾದರ್‌ ಇಂಡಿಯಾ’) ಎಂದು ಕರೆಯುವುದಿಲ್ಲ. ಅದು ನಾವು ಮಹಿಳೆಗೆ ನೀಡುವ ಗೌರವ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಬಣ್ಣಿಸಿದರು.

ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗ ಆಯೋಜಿಸಿದ್ದ 1ನೇ ಪ್ರಜಾಪ್ರಭುತ್ವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.

ಜನಸಂಖ್ಯೆಯಲ್ಲಿಶೇಕಡಾ 50ರಷ್ಟು ಮಹಿಳೆಯರಿದ್ದಾರೆ. ಮಹಿಳೆಯರು ಸಂಸತ್‌ನಲ್ಲಿಯೂ ಮೀಸಲಾತಿ ಪಡೆಯಬೇಕು ಮತ್ತು ಮೀಸಲಾತಿ ನೀಡಿದ ಬಳಿಕ ಅವರಿಗೆ ಹಣಕಾಸು ನೆರವು ಹಾಗೂ ಕಾರ್ಯಕಾರಿ ಜವಾಬ್ದಾರಿಗಳನ್ನೂ ನೀಡಬೇಕು ಎಂದು ಪ್ರತಿಪಾದಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡಣವೀಸ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.