ADVERTISEMENT

ಬಿಜೆಪಿ ಹಿಂದಿ ಭಾಷಿಕ ರಾಜ್ಯಗಳ ಪಕ್ಷವಲ್ಲ ಎಂದು ಕರ್ನಾಟಕದ ಉದಾಹರಣೆ ಕೊಟ್ಟ ಮೋದಿ 

ಏಜೆನ್ಸೀಸ್
Published 27 ಮೇ 2019, 13:49 IST
Last Updated 27 ಮೇ 2019, 13:49 IST
   

ವಾರಾಣಸಿ: ಬಿಜೆಪಿಯನ್ನು ಹಿಂದಿ ಭಾಷಿಕ ರಾಜ್ಯಗಳ ಪಕ್ಷ ಎನ್ನುವ ವಾದವನ್ನು ನರೇಂದ್ರ ಮೋದಿ ಅವರು ಕರ್ನಾಟಕದ ಉದಾಹರಣೆ ಮೂಲಕ ಅಲ್ಲಗಳೆದಿದ್ದಾರೆ.

ವಾರಾಣಸಿಯ ಮತದಾರರಿಗೆ ಧನ್ಯವಾದ ಅರ್ಪಿಸಲೆಂದು ಆಯೋಜಿಸಿದ್ದ ಪಕ್ಷದ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ‘ಕೆಲ ರಾಜಕೀಯ ಪಂಡಿತರು ಬಿಜೆಪಿಯನ್ನು ಹಿಂದಿ ಭಾಷಿಕ ರಾಜ್ಯ ಕೇಂದ್ರಿತ ಪಕ್ಷ ಎನ್ನುತ್ತಾರೆ. ಆದರೆ, ಕರ್ನಾಟಕದಲ್ಲಿ ನಾವು ಅತ್ಯಧಿಕ ಸ್ಥಾನಗಳನ್ನು ಗೆದ್ದಿದ್ದೇವೆ. ಬಿಜೆಪಿ ಈಗಲೂ ಹಿಂದಿ ಭಾಷಿಕ ರಾಜ್ಯಗಳ ಪಕ್ಷವೇವಾಗಿ ಉಳಿದಿದ್ದೇವೆಯೇ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

‘ಗೋವಾದಲ್ಲಿ ಐದು ವರ್ಷಗಳ ಕಾಲ ಸರ್ಕಾರ ನಡೆಸಿದ್ದೇವೆ. ಈಶಾನ್ಯ ರಾಜ್ಯಗಳು, ಅಸ್ಸಾಂ, ಲಡಾಕ್‌ನಲ್ಲಿ ನಾವೀಗ ಸರ್ಕಾರ ಹೊಂದಿದ್ದೇವೆ. ಆ ರಾಜ್ಯಗಳನ್ನು ಗೆಲ್ಲುತ್ತಿದ್ದೇವೆ. ನಾವು ಈಗಲೂ ಹಿಂದಿ ಭಾಷಿಕ ರಾಜ್ಯಗಳ ಪಕ್ಷವೇನಾ?’ ಎಂದಿದ್ದಾರೆ.

ADVERTISEMENT

ದಕ್ಷಿಣದ ಐದು ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಇಲ್ಲಿನ 28 ಲೋಕಸಭೆ ಕ್ಷೇತ್ರಗಳ ಪೈಕಿ 25+1 ಸ್ಥಾನವನ್ನು ಬಿಜೆಪಿ ಗೆದ್ದಿದೆ. ಆದರೆ, ಆಂಧ್ರ, ತಮಿಳುನಾಡು, ಕೇರಳಗಳಲ್ಲಿ ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ. ಆಂಧ್ರದಲ್ಲಂತೂ ಬಿಜೆಪಿಯು ನೋಟಾ ಮತಗಳಿಗಿಂತಲೂ ಕಡಿಮೆ ಮತ ಪಡೆದು ಹೀನಾಯ ಸ್ಥಿತಿ ಅನುಭವಿಸಿದೆ. ತೆಲಂಗಾಣದಲ್ಲಿ ನಾಲ್ಕು ಸ್ಥಾನಗಳನ್ನು ಗೆಲ್ಲುವಲ್ಲಿ ಬಿಜೆಪಿಗೆ ಸಫಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.