ADVERTISEMENT

ಚೀತಾಗಳ ಸಾವಿನ ಹೊಣೆ ಹೊರುತ್ತೇವೆ: ಕೇಂದ್ರ ಸಚಿವ ಭೂಪೇಂದ್ರ ಯಾದವ್

ಪಿಟಿಐ
Published 2 ಜೂನ್ 2023, 0:30 IST
Last Updated 2 ಜೂನ್ 2023, 0:30 IST
ಮರಿಯೊಂದಿಗೆ ಚೀತಾ (ಪ್ರಾತಿನಿಧಿಕ ಚಿತ್ರ)
ಮರಿಯೊಂದಿಗೆ ಚೀತಾ (ಪ್ರಾತಿನಿಧಿಕ ಚಿತ್ರ)   

ನವದೆಹಲಿ: ‘ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಸಂಭವಿಸಿದ ಚೀತಾಗಳ ಸಾವಿನ ಹೊಣೆಯನ್ನು ನಾವೇ ಹೊರುತ್ತೇವೆ. ಆದರೆ, ಅವುಗಳನ್ನು ಈ ರಾಷ್ಟ್ರೀಯ ಉದ್ಯಾನಕ್ಕೆ ಸ್ಥಳಾಂತರಗೊಳಿಸುವ ಯೋಜನೆಯನ್ನು ಯಶಸ್ವಿಗೊಳಿಸಲಾಗುವುದು’ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಗುರುವಾರ ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇದು ಅಂತರರಾಷ್ಟ್ರೀಯ ಯೋಜನೆಯಾಗಿದೆ. ಯೋಜನೆ ಅನುಷ್ಠಾನ ವೇಳೆ ಕೆಲ ಚೀತಾಗಳು ಸಾವನ್ನಪ್ಪಬಹುದು ಎಂದು ನಿರೀಕ್ಷೆ ಮಾಡಿದ್ದೆವು. ಈ ಬಗ್ಗೆ ನಾವು ಬಿಡುಗಡೆ ಮಾಡಿರುವ ಯೋಜನಾ ವರದಿಯಲ್ಲಿಯೂ ಉಲ್ಲೇಖಿಸಲಾಗಿದೆ’ ಎಂದರು.

‘ಭಾರತ ತಲುಪುವ ಮೊದಲೇ ಒಂದು ಚೀತಾ ಅಸ್ವಸ್ಥಗೊಂಡಿತ್ತು. ಉಳಿದ ಎರಡು ಚೀತಾಗಳ ಸಾವಿಗೆ ಸಂಬಂಧಿಸಿದ ಕಾರಣಗಳನ್ನು ಸಹ ನಾವು ವಿವರಿಸಿದ್ದೇವೆ’ ಎಂದು ಯಾದವ್‌ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.