ADVERTISEMENT

ಸೆಂಟ್ರಲ್ ವಿಸ್ಟಾ: ‘ಸುಪ್ರೀಂ’ ತೀರ್ಪು ಸ್ವಾಗತಿಸಿದ ಸಚಿವ ಹರ್ದೀಪ್ ಸಿಂಗ್ ಪುರಿ

‘ಪರಿಸರ ಕಾಳಜಿಯ ಬಗ್ಗೆ ಸರ್ಕಾರ ಸದಾ ಸೂಕ್ಷ್ಮವಾಗಿ ವರ್ತಿಸುತ್ತದೆ‘

ಪಿಟಿಐ
Published 5 ಜನವರಿ 2021, 8:14 IST
Last Updated 5 ಜನವರಿ 2021, 8:14 IST
ಹರ್‌ದೀಪ್‌ಸಿಂಗ್ ಪುರಿ
ಹರ್‌ದೀಪ್‌ಸಿಂಗ್ ಪುರಿ   

ನವದೆಹಲಿ: ಸೆಂಟ್ರಲ್ ವಿಸ್ಟಾ ರೀಡೆವಲಪ್‌ಮೆಂಟ್ ಪ್ರಾಜೆಕ್ಟ್‌ಗೆ ಅನುಮತಿ ನೀಡಿರುವ ಸುಪ್ರೀಂಕೋರ್ಟ್ ತೀರ್ಪನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಸ್ವಾಗತಿಸಿದ್ದು, ಪರಿಸರ ಕಾಳಜಿಯ ಬಗ್ಗೆ ಸರ್ಕಾರ ಸದಾ ಸೂಕ್ಷ್ಮವಾಗಿ ವರ್ತಿಸುತ್ತದೆ‘ ಎಂದು ಪ್ರತಿಪಾದಿಸಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು ಕಾರ್ಯಗೊಳಿಸುತ್ತಿರುವ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಖಾತೆ ಸಚಿವ ಹರದೀಪ್‌ ಸಿಂಗ್‌ ಪುರಿ, ‘ಸರ್ಕಾರ, ನಿರ್ಮಾಣದ ಸಮಯದಲ್ಲಿ ಅತ್ಯುನ್ನತ ಮಾನದಂಡಗಳನ್ನು ಅನುಸರಿಸಲಿದೆ‘ ಎಂದು ಸ್ಪಷ್ಟಪಡಿಸಿದರು.

‘ದೆಹಲಿ ವಿಶ್ವ ದರ್ಜೆಯ ರಾಜಧಾನಿಯಾಗುವ ಹಾದಿಯಲ್ಲಿದೆ. 2022ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಪೂರೈಸುತ್ತವೆ. ಅದರ ಮೊದಲ ಹೆಜ್ಜೆಯಲ್ಲಿ ಹೊಸ ಭಾರತದ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ಹೊಸ ಸಂಸತ್ತಿನ ಕಟ್ಟಡವೂ ಸಿದ್ಧವಾಗಲಿದೆ‘ ಎಂದು ಪುರಿ ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.