ADVERTISEMENT

ಪ್ರಿಲಿಮಿನರಿ ಪರೀಕ್ಷೆ: ಮಾಸ್ಕ್‌ ಧರಿಸುವುದು ಕಡ್ಡಾಯ– ಯುಪಿಎಸ್‌ಸಿ

ಪಿಟಿಐ
Published 10 ಸೆಪ್ಟೆಂಬರ್ 2020, 11:09 IST
Last Updated 10 ಸೆಪ್ಟೆಂಬರ್ 2020, 11:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಅಕ್ಟೋಬರ್‌ 4ರಂದು ನಡೆಸುವ ನಾಗರಿಕ ಸೇವಾ (ಪ್ರಿಲಿಮನರಿ) ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್‌ ಅಥವಾ ಮುಖಗವುಸು ಧರಿಸಿರಬೇಕು ಎಂದು ಯುಪಿಎಸ್‌ಸಿ ತಿಳಿಸಿದೆ.

ಪಾರದರ್ಶಕವಾಗಿರುವ ಬಾಟಲುಗಳಲ್ಲಿ ಸ್ಯಾನಿಟೈಜರ್ ‌ಅನ್ನು ಸಹ ಅಭ್ಯರ್ಥಿಗಳೇ ತರಬೇಕು. ಪರೀಕ್ಷಾ ಕೇಂದ್ರದಲ್ಲಿ ವ್ಯಕ್ತಿಗತ ಅಂತರ ಹಾಗೂ ಸ್ವಚ್ಛತೆಯನ್ನು ಕಾಪಾಡಬೇಕು ಎಂದೂ ಆಯೋಗ ತಿಳಿಸಿದೆ.

ಮೇ 31ರಂದುಪ್ರಿಲಿಮನರಿ ಪರೀಕ್ಷೆ ನಡೆಯಬೇಕಿತ್ತು. ಕೋವಿಡ್‌–19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿದ್ದ ಕಾರಣ ಮುಂದೂಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.