ADVERTISEMENT

ಮೂತ್ರವಿಸರ್ಜನೆ ಪ್ರಕರಣ: ಆರೋಪಿಯನ್ನು ಕೆಲಸದಿಂದ ಕಿತ್ತುಹಾಕಿದ ಅಮೆರಿಕದ ಕಂಪನಿ

ಪಿಟಿಐ
Published 6 ಜನವರಿ 2023, 13:28 IST
Last Updated 6 ಜನವರಿ 2023, 13:28 IST
   

ನವದೆಹಲಿ: ಏರ್‌ ಇಂಡಿಯಾ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪ ಹೊತ್ತಿರುವ ಉದ್ಯೋಗಿಯನ್ನು ಅಮೆರಿಕದ ಹಣಕಾಸು ಸೇವಾ ಕಂಪನಿ ವೆಲ್ಸ್‌ ಫೆರ್ಗೊ ಸಂಸ್ಥೆಯಿಂದ ಕಿತ್ತು ಹಾಕಿದೆ. ಉದ್ಯೋಗಿ ಮೇಲಿನ ಆರೋಪವು ತುಂಬ ಆಳವಾಗಿ ಮನಸ್ಸನ್ನು ಕಲಕಿದೆ ಎಂದು ಕಂಪನಿ ಬೇಸರ ವ್ಯಕ್ತಪಡಿಸಿದೆ.

ಈ ವ್ಯಕ್ತಿಯನ್ನು ವೆಲ್‌ ಫೆಗ್ರೊ ಕಂಪನಿಯನಿಂದ ವಜಾ ಮಾಡಲಾಗಿದೆ. ಉದ್ಯೋಗಿಗಳಿಂದ ವೃತ್ತಿಪರ ಘನತೆ ಹಾಗೂ ಉತ್ತಮ ನಡವಳಿಕೆಯನ್ನು ಬಯಸುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ಕಂಪನಿಯು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಕಳೆದ ವರ್ಷ ನ. 26 ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಸಂಚರಿಸುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.