ADVERTISEMENT

ಪಶ್ಚಿಮ ಬಂಗಾಳ: ವಿಧಾನ ಪರಿಷತ್‌ ರಚನೆಯ ನಿರ್ಣಯ ಅಂಗೀಕಾರ

ಪಿಟಿಐ
Published 6 ಜುಲೈ 2021, 19:47 IST
Last Updated 6 ಜುಲೈ 2021, 19:47 IST

ಕೋಲ್ಕತ್ತ: ವಿಧಾನ ಪರಿಷತ್ತಿನ ರಚನೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಸಮಿತಿ ಸಲ್ಲಿಸಿದ್ದ ವರದಿಯನ್ನು ಬೆಂಬಲಿಸುವ ನಿರ್ಣಯವನ್ನು ಪಶ್ಚಿಮ ಬಂಗಾಳದ ವಿಧಾನಸಭೆ ಮಂಗಳವಾರ ಅಂಗೀಕರಿಸಿತು.

ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಪಾರ್ಥಾ ಚಟರ್ಜಿ ಅವರು ಸಮಿತಿಯ ವರದಿಯನ್ನು ಮಂಡಿಸಿದರು.

ಸದನದಲ್ಲಿ ಹಾಜರಿದ್ದ 265 ಸದಸ್ಯರ ಪೈಕಿ 196 ಶಾಸಕರು ವಿಧಾನ ಪರಿಷತ್ತಿನ ರಚನೆಗೆ ಬೆಂಬಲ ನೀಡಿದರು. 69 ಶಾಸಕರು ಇದನ್ನು ವಿರೋಧಿಸಿದರು.

ADVERTISEMENT

ಈ ನಿರ್ಣಯವನ್ನು ವಿರೋಧಿಸಿದ ಬಿಜೆಪಿ ಶಾಸಕಾಂಗ ಪಕ್ಷ, ವಿಧಾನಸಭಾ ಚುನಾವಣೆಯಲ್ಲಿ ಸೋತವರಿಗೆ ಹಿಂಬಾಗಿಲಿನ ಮೂಲಕ ರಾಜಕೀಯ ಪ್ರವೇಶಕ್ಕೆ ಟಿಎಂಸಿ ಬಯಸಿದೆ ಎಂದು ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.