ADVERTISEMENT

ಪಶ್ಚಿಮ ಬಂಗಾಳದ ಇಬ್ಬರು ಬಿಜೆಪಿ ಶಾಸಕರ ರಾಜೀನಾಮೆ

ಪಿಟಿಐ
Published 13 ಮೇ 2021, 11:14 IST
Last Updated 13 ಮೇ 2021, 11:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೋಲ್ಕತ್ತ (ಪಿಟಿಐ): ಪಶ್ಚಿಮ ಬಂಗಾಳ ವಿಧಾನಸಭೆಗೆ ಆಯ್ಕೆಯಾಗಿದ್ದ ಬಿಜೆಪಿಯ ಲೋಕಸಭೆ ಸದಸ್ಯರಾದ ಜಗನ್ನಾಥ ಸರ್ಕಾರ್‌ ಮತ್ತು ನಿಶಿತ್‌ ಪ್ರಮಾಣಿಕ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಇಬ್ಬರು ಲೋಕಸಭೆಯಲ್ಲಿ ಕ್ರಮವಾಗಿ ರಣಘಾಟ್‌ ಮತ್ತು ಕೂಚ್‌ಬೆಹರ್‌ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಬುಧವಾರ ವಿಧಾನಸಭೆ ಸ್ಪೀಕರ್ ಬಿಮನ್‌ ಬ್ಯಾನರ್ಜಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.

ಬಿಜೆಪಿ ನಾಯಕತ್ವದ ಸೂಚನೆಯಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದು ಪ್ರಮಾಣಿಕ್‌ ತಿಳಿಸಿದರು. ಇವರ ಜೊತೆಗೆ ಬಿಜೆಪಿಯು, ಲೋಕಸಭೆಯ ಇನ್ನಿಬ್ಬರು ಸದಸ್ಯರಾದ ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೊ ಮತ್ತು ಲಾಕೆಟ್ ಚಟರ್ಜಿ, ರಾಜ್ಯಸಭೆ ಸದಸ್ಯ ಸ್ವಪನ್‌ ದಾಸ್‌ಗುಪ್ತಾ ಅವರನ್ನೂ ಕಣಕ್ಕಿಳಿಸಿತ್ತು.

ADVERTISEMENT

ಆದರೆ, ಇವರು ಸೋತಿದ್ದರು. ಈಚೆಗೆ ನಡೆದ, 292 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 77 ಸ್ಥಾನ ಗೆದ್ದಿದ್ದರೆ, ತೃಣಮೂಲ ಕಾಂಗ್ರೆಸ್‌ ಪಕ್ಷ 213 ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಉಳಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.