ಕೋಲ್ಕತ್ತ: ಪಶ್ಚಿಮ ಬಂಗಾಳದ ಕಾಲಿಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಅಭ್ಯರ್ಥಿ ಆಲಿಫಾ ಅಹಮದ್ ಗೆಲುವು ಸಾಧಿಸಿದ್ದಾರೆ.
ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಆಶಿಶ್ ಘೋಷ್ ಅವರ ವಿರುದ್ಧ ಆಲಿಫಾ ಅವರು 50,049 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಆಲಿಫಾ ಅವರು ಒಟ್ಟು 1,02,759 ಮತಗಳನ್ನು ಪಡೆದಿದ್ದು, ಘೋಷ್ ಅವರು 52,710 ಮತಗಳನ್ನು ಪಡೆದಿದ್ದಾರೆ. ಎಡಪಂಥೀಯ ಬೆಂಬಲಿಗ ಕಾಂಗ್ರೆಸ್‌ನ ಕಾಬಿಲ್ ಉದ್ದೀನ್ ಶೇಖ್ 28,348 ಮತಗಳನ್ನು ಪಡೆದಿದ್ದಾರೆ.
ಗೆಲುವಿನ ಬಳಿಕ ಪ್ರತಿಕ್ರಿಯಿಸಿರುವ ಅಲಿಫಾ ‘ಹಿಂದೂಗಳು ನಮಗೆ ಮತ ಹಾಕಿಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಹಿಂದೂಗಳಿದ್ದ ಪ್ರದೇಶದಲ್ಲಿಯೂ ಹೆಚ್ಚು ಮತಗಳನ್ನು ಪಡೆದಿದ್ದೇವೆ. ಯಾವುದೇ ಒಂದು ಸಮುದಾಯದ ಮತಗಳನ್ನು ಗುರಿಯಾಗಿಸಿಕೊಂಡಿರಲಿಲ್ಲ, ಎಲ್ಲರ ಬಳಿಯೂ ಮತಯಾಚಿಸಿದ್ದೇವೆ. ಬಂಗಾಳದಲ್ಲಿ ಕೋಮು ವಿಭಜನೆ ಮಾಡುವ ಉದ್ದೇಶವನ್ನು ನಮ್ಮ ಪಕ್ಷ ಹೊಂದಿಲ್ಲ ಎನ್ನುವುದನ್ನು ಫಲಿತಾಂಶ ಸಾಬೀತುಪಡಿಸಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.