ADVERTISEMENT

ಸಂದೇಶ್‌ಖಾಲಿ ಗಲಭೆ: ಪ್ರಮುಖ IPS ಅಧಿಕಾರಿಗಳ ವರ್ಗಾವಣೆ ಮಾಡಿದ ಬಂಗಾಳ ಸರ್ಕಾರ

ಪಿಟಿಐ
Published 18 ಫೆಬ್ರುವರಿ 2024, 5:36 IST
Last Updated 18 ಫೆಬ್ರುವರಿ 2024, 5:36 IST
   

ಕೋಲ್ಕತ್ತಾ: ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಹಿಂಸಾಚಾರ ಬೆನ್ನಲ್ಲೇ, ಪಶ್ಚಿಮ ಬಂಗಾಳ ಸರ್ಕಾರವು ದೊಡ್ಡ ಪ್ರಮಾಣದಲ್ಲಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ.

ಬರಾಸತ್‌ ವಲಯದ ಡಿಐಜಿ ಆಗಿದ್ದ ಸುಮಿತ್‌ ಕುಮಾರ್‌ ಅವರನ್ನು ಭದ್ರತೆ ವಿಭಾಗದ ಡಿ.ಐ.ಜಿ.ಯಾಗಿ ವರ್ಗಾವಣೆ ಮಾಡಲಾಗದೆ.

ಮಾಲ್ಡಾ ವಿಭಾಗದ ಡಿಐಜಿಯಾಗಿದ್ದ ಬಾಸ್ಕರ್ ಮುಖರ್ಜಿಯನ್ನು ಸುಮಿತ್‌ ಅವರ ಜಾಗಕ್ಕೆ ನಿಯುಕ್ತಿಗೊಳಿಸಲಾಗಿದೆ.

ADVERTISEMENT

ಇದೊಂದು ಸಹಜ ಪ್ರಕ್ರಿಯೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಂಚಾರ ಹಾಗೂ ರಸ್ತೆ ಸುರಕ್ಷತೆಯ ಎ.ಡಿ.ಜಿ ಹಾಗೂ ಐಜಿಪಿಯಾಗಿದ್ದ ಸುಪ್ರತಿಮ್ ಸರ್ಕಾರ್ ಅವರನ್ನು ದಕ್ಷಿಣ ಬಂಗಾಳದ ಎ.ಡಿ.ಜಿ ಹಾಗೂ ಐಜಿಪಿಯಾಗಿ ವರ್ಗಾವಣೆ ಮಾಡಿದೆ. ಪಶ್ಚಿಮ ವಿಭಾಗದ ಎ.ಡಿ.ಜಿ ಹಾಗೂ ಐ.ಜಿ.ಪಿ. ತ್ರಿಪುರಾರಿ ಅಥರ್ವ್ ಅವರನ್ನು ರಾಜ್ಯ ಎಸ್‌.ಟಿ.ಎಫ್‌.ನ ನೂತನ ಎ.ಡಿ.ಜಿ.ಯಾಗಿ ವರ್ಗಾವಣೆ ಮಾಡಲಾಗಿದೆ.

ಇನ್ನು ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.