ADVERTISEMENT

ಅಕ್ರಮ ಬಾಂಬ್ ತಯಾರಿಕೆಗೆ ನೆಲೆಯಾದ ಪಶ್ಚಿಮ ಬಂಗಾಳ: ರಾಜ್ಯಪಾಲ ಜಗದೀಪ್ ಧನಕರ್ ಟೀಕೆ

ಪಿಟಿಐ
Published 19 ಸೆಪ್ಟೆಂಬರ್ 2020, 10:40 IST
Last Updated 19 ಸೆಪ್ಟೆಂಬರ್ 2020, 10:40 IST
ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್
ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್   

ಕೋಲ್ಕತ್ತ: ‘ಪಶ್ಚಿಮ ಬಂಗಾಳವು ಅಕ್ರಮ ಬಾಂಬ್ ತಯಾರಿಕೆಗೆ ನೆಲೆಯಾಗಿದೆ. ರಾಜ್ಯದಲ್ಲಿ ಕಾನೂನು–ಸುವ್ಯವಸ್ಥೆ ಕುಸಿಯುತ್ತಿದ್ದು, ರಾಜ್ಯ ಆಡಳಿತವು ಹೊಣೆಗಾರಿಕೆಯಿಂದ ನುಣುಚಿಕೊಳ್ಳಲಾಗದು’ ಎಂದು ರಾಜ್ಯಪಾಲ ಜಗದೀಪ್ ಧನಕರ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಆರು ಮಂದಿ ಹಾಗೂ ಕೇರಳದ ಎರ್ನಾಕುಲಂನಲ್ಲಿ ಮೂವರು ಅಲ್‌ ಖೈದಾ ಉಗ್ರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

‘ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸಬಲ್ಲ ಸಾಮರ್ಥ್ಯವುಳ್ಳ ಅಕ್ರಮ ಬಾಂಬ್ ತಯಾರಿಕೆಗೆ ರಾಜ್ಯವು ಉತ್ತಮ ನೆಲೆಯಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯ ಪೊಲೀಸರು ರಾಜಕೀಯ ಮಾಡುವುದರಲ್ಲಿ ಮತ್ತು ಪ್ರತಿಪಕ್ಷಗಳನ್ನು ಗುರಿಯಾಗಿಸುವುದರಲ್ಲಿ ನಿರತರಾಗಿದ್ದಾರೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯಲ್ಲಿನ ಈ ಆತಂಕಕಾರಿ ಕುಸಿತದ ಹೊಣೆಗಾರಿಕೆಯಿಂದ ರಾಜ್ಯ ಪೋಲಿಸ್ ಚುಕ್ಕಾಣಿ ಹಿಡಿದಿರುವವರು ನುಣುಚಿಕೊಳ್ಳಲಾಗದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.