ADVERTISEMENT

ಪಶ್ಚಿಮಬಂಗಾಳ| ಎಸ್ಐಆರ್‌ಗೆ ವಿರೋಧ: ಚುನಾವಣಾ ಆಯೋಗದ ವಿಶೇಷ ವೀಕ್ಷಕನಿಗೆ ಘೇರಾವ್

ಪಿಟಿಐ
Published 29 ಡಿಸೆಂಬರ್ 2025, 16:09 IST
Last Updated 29 ಡಿಸೆಂಬರ್ 2025, 16:09 IST
   

ಕೋಲ್ಕತ್ತ: ಪಶ್ಚಿಮಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್‌) ವಿರೋಧ ಮುಂದುವರಿದಿದೆ.

ಶಿರಾಕೋಲ್‌ ಪ್ರೌಢಶಾಲೆಯಲ್ಲಿರುವ ಎಸ್‌ಐಆರ್‌ ಕೇಂದ್ರಕ್ಕೆ ಚುನಾವಣಾ ಆಯೋಗದ ವಿಶೇಷ ವೀಕ್ಷಕ ಸಿ. ಮುರುಗನ್‌ ಭೇಟಿ ನೀಡಿದ್ದಾಗ ಸ್ಥಳೀಯರು ಘೇರಾವ್ ಹಾಕಿದ್ದಾರೆ.

ಟಿಎಂಸಿಯ ಜಿಲ್ಲಾ ಪರಿಷತ್ ಅಧ್ಯಕ್ಷ ಮುಜಿಬರ್ ರೆಹಮಾನ್ ಮೊಲ್ಲಾ ನೇತೃತ್ವದಲ್ಲಿ ಪ್ರತಿಭಟಿಸಿದ ಸ್ಥಳೀಯರು, ಎಸ್‌ಐಆರ್ ಅನುಷ್ಠಾನಗೊಳಿಸದಂತೆ ತಾಕೀತು ಮಾಡಿದರು.

ADVERTISEMENT

ದಕ್ಷಿಣ 24 ಪರಗಣ ಜಿಲ್ಲೆಯ ಮಗರಾಹಾಟ್‌ನಲ್ಲಿರುವ ಎಸ್‌ಐಆರ್‌ ಕೇಂದ್ರಕ್ಕೆ ಭೇಟಿ ನೀಡಿದಾಗ ಸಿ.ಮುರುಗನ್‌ ಅವರ ವಾಹನಕ್ಕೆ ಸ್ಥಳೀಯರು ಹಾನಿ ಮಾಡಿದ್ದಾರೆ. ಸ್ಥಳದಿಂದ ವಾಹನ ವಾಪಸ್‌ ತೆರಳದಂತೆ ತಡೆ ಹಾಕಿದರು. ಪೊಲೀಸರ ಭದ್ರತೆ ನಡುವೆಯೂ ಕಾರಿನ ಬಾನೆಟ್‌ ಮೇಲೆ ಹತ್ತಿ ಗಾಜನ್ನು ಒಡೆದುಹಾಕಲು ಯತ್ನಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬಿತ್ತರಗೊಂಡಿದೆ.

ಕಾರಿನ ಚಾಲಕನ ಬದಿಯ ಬಾಗಿಲಿನ ಹಿಡಿ ಸೀಳಿಕೊಂಡಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದು, ಚುನಾವಣಾ ಆಯೋಗದ ಮೂಲಗಳು ಈ ವಿಡಿಯೊವನ್ನು ಹಂಚಿಕೊಂಡಿವೆ.

ಹೌರಾ ಜಿಲ್ಲೆಯಲ್ಲೂ ವಿರೋಧ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.