ADVERTISEMENT

ಬಹುಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶ: ಇಬ್ಬರ ಬಂಧನ

ಪಿಟಿಐ
Published 21 ಅಕ್ಟೋಬರ್ 2021, 11:17 IST
Last Updated 21 ಅಕ್ಟೋಬರ್ 2021, 11:17 IST
ತಿಮಿಂಗಿಲ ವಾಂತಿ ಗಟ್ಟಿಗಳು (ಅಂಬೆರ್ಗ್ರಿಸ್) – ಸಾಂದರ್ಭಿಕ ಚಿತ್ರ
ತಿಮಿಂಗಿಲ ವಾಂತಿ ಗಟ್ಟಿಗಳು (ಅಂಬೆರ್ಗ್ರಿಸ್) – ಸಾಂದರ್ಭಿಕ ಚಿತ್ರ   

ಕಣ್ಣೂರು, ಕೇರಳ: ಕಣ್ಣೂರು ಜಿಲ್ಲೆಯ ತಳಿಪ್ಪರಂಬದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ತಿಮಿಂಗಿಲ ವಾಂತಿ (ಅಂಬೆರ್ಗ್ರಿಸ್) ಮಾರಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

ಜಿಲ್ಲೆಯ ಕೊಯಿಪ್ರಮ್‌ನ ಇಸ್ಮಾಯಿಲ್ ಮತ್ತು ಬೆಂಗಳೂರಿನ ಅಬ್ದುಲ್ ರಶೀದ್ ಅವರನ್ನು ಬಂಧಿಸಲಾಗಿದೆ ಎಂದು ತಿರುವನಂತಪುರಂನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.

ಮಲಪ್ಪುರಂ ಜಿಲ್ಲೆಯ ನಿಲಂಬೂರಿನ ವ್ಯಕ್ತಿಗಳಿಗೆ 9 ಕೆ.ಜಿ ತೂಕದ ಅಂಬರ್‌ಗ್ರೀಸ್ ಅನ್ನು ಸುಮಾರು ₹30 ಕೋಟಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.