ADVERTISEMENT

70 ವರ್ಷಗಳ ಬಗ್ಗೆ ಕೇಳುತ್ತಿದ್ದೀರಿ, ಕಳೆದ 5 ವರ್ಷಗಳಲ್ಲಿ ನೀವೇನು ಮಾಡಿದ್ದೀರಿ?

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 6:15 IST
Last Updated 20 ಮಾರ್ಚ್ 2019, 6:15 IST
   

ಮಿರ್ಜಾಪುರ್‌: ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

70 ವರ್ಷಗಳ ಕಾಂಗ್ರೆಸ್ ಆಡಳಿತ ಬಗ್ಗೆ ನೀವು ಪ್ರಶ್ನೆ ಕೇಳುತ್ತಿದ್ದೀರಿ.ಕಳೆದ 5 ವರ್ಷಗಳ ಕಾಲನೀವು ಅಧಿಕಾರ ನಡೆಸುತ್ತಿದ್ದೀರಿ. ಈ ವರ್ಷಗಳಲ್ಲಿ ನೀವೇನು ಮಾಡಿದ್ದೀರಿ? ಎಂದು ಪ್ರಿಯಾಂಕಾ ಬಿಜೆಪಿಯನ್ನುಪ್ರಶ್ನಿಸಿದ್ದಾರೆ.

ವಾರಣಾಸಿ ಸಮೀಪದ ಮಿರ್ಜಾಪುರ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಿಯಾಂಕಾ, ಮಂಗಳವಾರ ಅಲ್ಲಿನ ವಿದ್ಯಾವಾಸಿನಿ ಮಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಪ್ರಿಯಾಂಕಾ ದೇವಾಲಯದೊಳಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿ ಸೇರಿದ್ದ ಜನರು ಹರ್ ಹರ್ ಮೋದಿ ಎಂದು ಕೂಗಿದ್ದಾರೆ.ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು 'ರಾಹುಲ್ ರಾಹುಲ್'ಎಂದು ಕೂಗಿ ದೇವಸ್ಥಾನದ ಗಂಟೆಗಳನ್ನು ಬಾರಿಸಿದ್ದಾರೆ.

ADVERTISEMENT

ದೇವಾಲಯಕ್ಕೆ ಭೇಟಿ ನೀಡಿದ ನಂತರ ಪ್ರಿಯಾಂಕಾ, ಹಜರತ್ ಖ್ವಾಜಾ ಇಸ್ಮಿಲೆ ಕಿಶ್ಟಿ ದರ್ಗಾಗೆ ಭೇಟಿ ನೀಡಿದ್ದಾರೆ.

ಭಟೌಲಿ ಘಾಟ್ನಿಂದ ಗಂಗಾ ನದಿಯಲ್ಲಿ 15 ಕಿ.ಮೀ ದೋಣಿ ಪ್ರಯಾಣ ಮಾಡಿ ಮಂಗಳವಾರ ಸಂಜೆ ಮಿರ್ಜಾಪುರ್‌ನ ಸಿಂಧೋರಾಗೆ ತಲುಪಿದ್ದರು.ಅಲ್ಲಿಯೂ ಕೆಲವು ಮಂದಿ ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಆಮೇಲೆ ಅಲ್ಲಿದ ಪ್ರಿಯಾಂಕಾ ಸಣ್ಣ ದೋಣಿ ಮೂಲಕ ಚುವಾರ್ ತಲುಪಿ ರೋಡ್ ಶೋ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.