ADVERTISEMENT

ಠೇವಣಿ ಕಳೆದುಕೊಳ್ಳುವ ಕಾಂಗ್ರೆಸ್‌ಗಾಗಿ ನಾವು ಸ್ಥಾನ ಬಿಟ್ಟುಕೊಡಬೇಕೇ?: ಲಾಲೂ

ಪಿಟಿಐ
Published 24 ಅಕ್ಟೋಬರ್ 2021, 13:11 IST
Last Updated 24 ಅಕ್ಟೋಬರ್ 2021, 13:11 IST
ಲಾಲೂ ಪ್ರಸಾದ್‌ ಯಾದವ್‌
ಲಾಲೂ ಪ್ರಸಾದ್‌ ಯಾದವ್‌   

ನವದೆಹಲಿ:ಕಾಂಗ್ರೆಸ್‌ ಜೊತೆಗಿನ ಮೈತ್ರಿಯ ಬಗ್ಗೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅಧ್ಯಕ್ಷ ಲಾಲೂ ಪ್ರಸಾದ್‌ ಯಾದವ್‌ ಕಿಡಿಕಾರಿದ್ದಾರೆ. ಮೈತ್ರಿ ಕೂಟದಲ್ಲಿ ಆ ಪಕ್ಷದ ಉಪಯೋಗವೇನು ಎಂದು ಪ್ರಶ್ನಿಸಿರುವ ಅವರು, ಠೇವಣಿ ಕಳೆದುಕೊಳ್ಳುವ ರಾಷ್ಟ್ರೀಯ ಪಕ್ಷಕ್ಕಾಗಿ‌ ನಾವು ವಿಧಾನಸಭೆ ಉಪಚುನಾವಣೆಯಲ್ಲಿ ಸ್ಥಾನ ಬಿಟ್ಟುಕೊಡಬೇಕೇ ಎಂದು ಪ್ರಶ್ನಿಸಿದ್ದಾರೆ.

ಉಪಚುನಾವಣೆ ನಡೆಯಲಿರುವ ಎರಡು ಕ್ಷೇತ್ರಗಳಲ್ಲಿ ಒಂದನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಆರ್‌ಜೆಡಿ ನಿರಾಕರಿಸಿದೆ. ಹೀಗಾಗಿ ಬಿಹಾರದಲ್ಲಿ ಮೈತ್ರಿ ಮುರಿದು ಬೀಳುವ ಸಾಧ್ಯತೆಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ʼಏನದು ಕಾಂಗ್ರೆಸ್‌ ಜೊತೆಗಿನ ಮೈತ್ರಿ?' ಎನ್ನುವ ಮೂಲಕಮೈತ್ರಿಯ ಪ್ರಯೋಜನದ ಕುರಿತು ಮರುಪ್ರಶ್ನೆ ಹಾಕಿದ್ದಾರೆ.

ʼಅದು (ಕಾಂಗ್ರೆಸ್‌) ಸೋಲುವುದಕ್ಕಾಗಿ ಸ್ಥಾನಬಿಟ್ಟುಕೊಡಬೇಕೇ? ಅದುಠೇವಣಿಯನ್ನೂ ಕಳೆದುಕೊಳ್ಳಲಿದೆʼ ಎಂದು ಹೇಳಿದ್ದಾರೆ.

ADVERTISEMENT

‌ಬಿಹಾರ ಕಾಂಗ್ರೆಸ್‌ ಉಸ್ತುವಾರಿ ಭಕ್ತ ಚರಣ್‌ ದಾಸ್‌ ಅವರನ್ನೂ ಗೇಲಿ ಮಾಡಿದ್ದಾರೆ. ದಾಸ್‌ ಅವರು, ಬಿಹಾರದಲ್ಲಿ ಆರ್‌ಜೆಡಿ ನೇತೃತ್ವದ ಮೈತ್ರಿಕೂಟದ ಭಾಗವಾಗಿ ತಮ್ಮ ಪಕ್ಷ ಇರುವುದಿಲ್ಲ ಎಂದು ಇತ್ತೀಚೆಗೆ ಹೇಳಿದ್ದರು.

ಉಪಚುನಾವಣೆ ನಡೆಯಲಿರುವ ಕುಶೇಶ್ವರ್‌ ಆಸ್ತಾನ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಆರ್‌ಜೆಡಿ ನಿರ್ಧರಿಸಿದೆ. 2020ರ ಚುಣಾವಣೆಯಲ್ಲಿ ಕುಶೇಶ್ವರದಿಂದ ಕಾಂಗ್ರೆಸ್‌ ಮತ್ತು ತಾರಾಪುರದಿಂದ ಆರ್‌ಜೆಡಿ ಸ್ಪರ್ಧಿಸಿತ್ತು.

ಕಳೆದ (2020ರ) ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿರೀಕ್ಷಿತ ಸಂಖ್ಯೆಯಲ್ಲಿ ಸ್ಥಾನ ಗಳಿಸಲು ವಿಫಲವಾದದ್ದು, ಮೈತ್ರಿಕೂಟದಲ್ಲಿ ಆ ಪಕ್ಷದ ಸ್ಥಾನವನ್ನು ಪ್ರಶ್ನಿಸಲು ಪ್ರೇರೇಪಿಸಿದೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆಚುನಾವಣೆಯಲ್ಲಿ 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಕೇವಲ19ಸ್ಥಾನ ಗೆದ್ದಿತ್ತು.144 ಕಡೆಗಳಲ್ಲಿ ಸ್ಪರ್ಧಿಸಿದ್ದ ಆರ್‌ಜೆಡಿ75 ಸ್ಥಾನಗಳನ್ನು ಜಯಿಸಿತ್ತು. ಹೀಗಾಗಿ ಕಾಂಗ್ರೆಸ್‌ಗೆ ಅದರ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಸ್ಥಾನ ಬಿಟ್ಟುಕೊಟ್ಟಿದ್ದೆವು ಎಂದು ಆರ್‌ಜೆಡಿ ಪ್ರತಿಪಾದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.