ಚೆನ್ನೈ: ‘ರಾಜ್ಯದಲ್ಲಿ ಪ್ರಯಾಣಿಸುವಾಗೆಲ್ಲ ‘ತಮಿಳುನಾಡು ಹೋರಾಡಲಿದೆ’ ಎಂಬ ಪೋಸ್ಟರ್ ಕಾಣಿಸುತ್ತದೆ. ಯಾರೊಂದಿಗೆ ಹೋರಾಡುತ್ತದೆ ಎಂಬುದೇ ತಿಳಿಯುತ್ತಿಲ್ಲ’ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಭಾನುವಾರ ಹೇಳಿದರು.
ಸ್ವಾಮಿ ತಿರುವರುತ್‌ಪ್ರಕಾಶ ವಲ್ಲಾರ್ ಅವರ 202ನೇ ಅವತಾರ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇಂಥ ಮನೋಭಾವ ನಮ್ಮಿಂದ ದೂರಾಗಬೇಕು. ನಾವೆಲ್ಲ ಸಹೋದರ–ಸಹೋದರಿಯರು. ನಮ್ಮ ಮಧ್ಯೆ ಯಾವುದೇ ಸಂಘರ್ಷ ಅಥವಾ ಹೋರಾಟ ಬೇಡ. ನಾವೆಲ್ಲ ಪರಸ್ಪರ ಒಟ್ಟಿಗೆ ಜೀವಿಸಬೇಕು, ಒಟ್ಟಿಗೆ ಸಮೃದ್ಧಿ ಸಾಧಿಸಬೇಕು’ ಎಂದರು.
ಸ್ಟಾಲಿನ್ ಪ್ರತಿಕ್ರಿಯೆ:
ರಾಜ್ಯಪಾಲರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ‘ರಾಜ್ಯದಲ್ಲಿ ಹಿಂದಿ ಸ್ವೀಕರಿಸಿದರೆ ಮಾತ್ರ ಶೈಕ್ಷಣಿಕ ಅನುದಾನ ನೀಡುವುದಾಗಿ ಹೇಳುವ ಕೇಂದ್ರ ಸರ್ಕಾರದ ದಾರ್ಷ್ಟ್ಯದ ವಿರುದ್ಧ ತಮಿಳುನಾಡು ಹೋರಾಡಲಿದೆ. ಚುನಾಯಿತ ಸರ್ಕಾರವನ್ನು ಹತ್ತಿಕ್ಕುವ, ಜನರ ಇಚ್ಛಾಶಕ್ತಿಯ ವಿರುದ್ಧ ಹೋಗುವ ಪ್ರಜಾಪ್ರಭುತ್ವ ವಿರೋಧಿಗಳ ವಿರುದ್ಧ ಹೋರಾಡಲಿದೆ’ ಎಂದು ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.