ADVERTISEMENT

ವಕ್ಫ್‌ (ತಿದ್ದುಪಡಿ) ಮಸೂದೆಯಲ್ಲಿ ಹೊಸದೇನಿದೆ?

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2025, 23:06 IST
Last Updated 3 ಏಪ್ರಿಲ್ 2025, 23:06 IST
   

ವಕ್ಫ್‌ (ತಿದ್ದುಪಡಿ) ಮಸೂದೆಯಲ್ಲಿ ಹೊಸದೇನಿದೆ?

  • ಆಸ್ತಿಯನ್ನು ‘ವಕ್ಫ್’ ಎಂದು ಘೋಷಿಸುವ ಅಧಿಕಾರವನ್ನು ವಕ್ಫ್ ಮಂಡಳಿಗೆ ನೀಡುವ ಸೆಕ್ಷನ್‌ 40 ಅನ್ನು ಇದು ಅನೂರ್ಜಿತಗೊಳಿಸುತ್ತದೆ. 

  • ಕೇಂದ್ರ ಹಾಗೂ ರಾಜ್ಯಗಳ ಮಟ್ಟದ ವಕ್ಫ್‌ ಮಂಡಳಿಯಲ್ಲಿ ಮುಸ್ಲಿಮೇತರರು, ಮಹಿಳೆಯರು ಸದಸ್ಯರಾಗಿರುತ್ತಾರೆ.

    ADVERTISEMENT
  • ಆಸ್ತಿಯೊಂದು ವಕ್ಫ್‌ಗೆ ಸೇರಿದ್ದೇ ಅಥವಾ ಸರ್ಕಾರಕ್ಕೆ ಸೇರಿದ್ದೇ ಎಂಬುದನ್ನು ಜಿಲ್ಲಾಧಿಕಾರಿಗಿಂತ ಮೇಲಿನ ಶ್ರೇಣಿಯ ಅಧಿಕಾರಿ ತೀರ್ಮಾನಿಸುತ್ತಾರೆ.

  • ವಕ್ಫ್‌ ಮಂಡಳಿಯ ಸಿಇಒ ನೇಮಕ ರಾಜ್ಯ ಸರ್ಕಾರದ ಅಧಿಕಾರ. ಮಂಡಳಿಯು ಸೂಚಿಸುವ ಇಬ್ಬರ ಪೈಕಿ ಒಬ್ಬರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಬೇಕು, ಆತ ಮುಸ್ಲಿಮೇತರನೂ ಆಗಬಹುದು.

  • ವಕ್ಫ್‌ ನ್ಯಾಯಮಂಡಳಿಯ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು. ಈ ಮೊದಲು ನ್ಯಾಯಮಂಡಳಿಯ ಆದೇಶ ಅಂತಿಮವಾಗಿತ್ತು.

  • ಅತಿಕ್ರಮಣಕ್ಕೆ ಒಳಗಾಗಿರುವ ಆಸ್ತಿಯನ್ನು ವಕ್ಫ್‌ ಮಂಡಳಿಯು ಮರಳಿ ಪಡೆಯಲು 12 ವರ್ಷಗಳ ಮಿತಿಗೆ ಇದ್ದ ವಿನಾಯಿತಿಯನ್ನು ತೆಗೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.