ADVERTISEMENT

ದೇಶದ ಭದ್ರತೆ, ಸುರಕ್ಷತೆ ಬಗ್ಗೆ ಮೋದಿ ಮಾತನಾಡುವುದು ಯಾವಾಗ: ರಾಹುಲ್‌ ಪ್ರಶ್ನೆ

ಪ್ರಧಾನಿ ಮೋದಿಗೆ ರಾಹುಲ್‌ ಗಾಂಧಿ ಪ್ರಶ್ನೆ

ಪಿಟಿಐ
Published 28 ಜೂನ್ 2020, 8:36 IST
Last Updated 28 ಜೂನ್ 2020, 8:36 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ    

ನವದೆಹಲಿ: ‘ದೇಶದ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಮಾತನಾಡುವುದು ಯಾವಾಗ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಪ್ರಧಾನಿ ಅವರು ಪ್ರತಿ ತಿಂಗಳು ನಡೆಸುವ ‘ಮನದ ಮಾತು’ ಆಕಾಶವಾಣಿ ಕಾರ್ಯಕ್ರಮದ ಭಾನುವಾರದ ಸರಣಿ ಪ್ರಸಾರವಾಗುವುದಕ್ಕೂ ಸ್ವಲ್ಪ ಸಮಯ ಮುನ್ನ ರಾಹುಲ್‌ ಈ ಕುರಿತು ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲ ಅವರೂ ಟ್ವೀಟ್‌ ಮೂಲಕ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಈಗ ನೇಪಾಳವೂ ಗಡಿಯಲ್ಲಿ ಸೇನೆ ನಿಯೋಜನೆ ಮಾಡಿದೆ. ‘ಮೋದಿ ಇದ್ದರೆ ಇದೂ ಸಾಧ್ಯ’ ಎಂದು ಮೋದಿ ಹೈ ತೊ ಮುಮ್ಕಿನ್‌ ಹೈ (ಮೋದಿ ಇದ್ದರೆ ಸಾಧ್ಯವಿದೆ) ಎಂಬ ಬಿಜೆಪಿಯ ಘೋಷವಾಕ್ಯದ ವ್ಯಂಗ್ಯವಾಡಿದ್ದಾರೆ. ತಮ್ಮ ಟ್ವೀಟ್‌ ಜತೆಗೆ ಅವರು ನೇಪಾಳವು ಗಡಿಯಲ್ಲಿ ಸೇನೆ ನಿಯೋಜಿಸಿರುವುದಕ್ಕೆ ಸಂಬಂಧಿಸಿದ ವರದಿಯನ್ನು ಟ್ಯಾಗ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.