ADVERTISEMENT

ಉಚಿತ ಕೋವಿಡ್ ಲಸಿಕೆ ನೀಡಿಕೆಯೇ ಇಂಧನ ದರ ಏರಿಕೆಗೆ ಕಾರಣ: ಕೇಂದ್ರ ಸಚಿವ ರಾಮೇಶ್ವರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಅಕ್ಟೋಬರ್ 2021, 3:12 IST
Last Updated 12 ಅಕ್ಟೋಬರ್ 2021, 3:12 IST
ರಾಮೇಶ್ವರ್ ತೆಲಿ (ಚಿತ್ರ ಕೃಪೆ – ರಾಮೇಶ್ವರ್ ತೆಲಿ ಟ್ವಿಟರ್ ಖಾತೆ)
ರಾಮೇಶ್ವರ್ ತೆಲಿ (ಚಿತ್ರ ಕೃಪೆ – ರಾಮೇಶ್ವರ್ ತೆಲಿ ಟ್ವಿಟರ್ ಖಾತೆ)   

ನವದೆಹಲಿ: ಉಚಿತವಾಗಿ ಕೋವಿಡ್–19 ಲಸಿಕೆ ನೀಡಿದ್ದೇ ಇಂಧನ ದರ ಏರಿಕೆಗೆ ಕಾರಣ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯ ರಾಜ್ಯ ಖಾತೆ ಸಚಿವ ರಾಮೇಶ್ವರ್ ತೆಲಿ ಪ್ರತಿಪಾದಿಸಿದ್ದಾರೆ.

ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ದಾಖಲೆಯ ಗರಿಷ್ಠ ಮಟ್ಟ ತಲುಪಿರುವ ಸಂದರ್ಭದಲ್ಲೇ ಸಚಿವರು ಈ ಹೇಳಿಕೆ ನೀಡಿರುವುದಾಗಿ ‘ಎಎನ್‌ಐ’ ವರದಿ ಮಾಡಿದೆ.

ಅಸ್ಸಾಂನಲ್ಲಿ ವರದಿಗಾರರ ಜತೆ ಮಾತನಾಡಿದ ಅವರು, ‘ಇಂಧನ ಬೆಲೆ ಹೆಚ್ಚಿಲ್ಲ, ಅದು ತೆರಿಗೆಗಳನ್ನು ಒಳಗೊಂಡಿದೆ. ನೀವು ಉಚಿತ ಲಸಿಕೆಯನ್ನು ಪಡೆಯಬೇಕೆಂದರೆ, ಅದಕ್ಕೆ ಹಣ ಎಲ್ಲಿಂದ ಬರುತ್ತದೆ? ಲಸಿಕೆಗೆ ನೀವು ಹಣ ಪಾವತಿಸಿಲ್ಲ. ಹಾಗಾಗಿ ತೆರಿಗೆ ಮೂಲಕ ಹಣ ಸಂಗ್ರಹಿಸಲಾಗಿದೆ’ ಎಂದು ಸಚಿವರು ಹೇಳಿದ್ದಾರೆ.

ADVERTISEMENT

ಸೋಮವಾರವೂ ಪೆಟ್ರೋಲ್‌ ದರ ಲೀಟರಿಗೆ 30 ಪೈಸೆ ಮತ್ತು ಡೀಸೆಲ್‌ ದರ ಲೀಟರಿಗೆ 35 ಪೈಸೆ ಹೆಚ್ಚಳವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.