ಅಹಮದಾಬಾದ್: ದುರಂತಕ್ಕೀಡಾದ ವಿಮಾನ ಹಾರಿಸಿದ್ದ ಪೈಲಟ್‌ಗಳಿಬ್ಬರು 9,300 ಗಂಟೆಗಳ ಕಾಲ ವಿಮಾನ ಹಾರಿಸಿದ್ದ ಅನುಭವ ಹೊಂದಿದ್ದರು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಅವರು 8,200 ಗಂಟೆ, ಸಹ ಪೈಲಟ್ ಆಗಿದ್ದ ಕ್ಲೈವ್ ಕುಂದರ್ 1,100 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು. ಸಭರ್ವಾಲ್ ಅವರು (ಲೈನ್ ಟ್ರೇನಿಂಗ್ ಕ್ಯಾಪ್ಟನ್–ಎಲ್‌ಟಿಸಿ) ಹೊಸ ಪೈಲಟ್‌ಗಳಿಗೆ ತರಬೇತಿ ನೀಡುವ ಪ್ರಮಾಣೀಕೃತ ಅನುಭವಿ ಪೈಲಟ್ ಕೂಡ ಆಗಿದ್ದರು.
ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು ಪಶ್ಚಿಮ ಬಂಗಾಳದ ನೇತಾಜಿ ಸುಭಾಷ್‌ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೊದಲ ಸಲ ಬಂದಿಳಿದ ವೇಳೆ ಆ ವಿಮಾನದಲ್ಲಿ ಇದ್ದ ಪೈಲಟ್‌ಗಳಲ್ಲಿ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಕೂಡ ಒಬ್ಬರಾಗಿದ್ದರು.
ಆಗ ಜೆ.ಎಂ.ಜೋಸೆಫ್ ಅವರು ಮುಖ್ಯ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದರೆ, ಬೋಯಿಂಗ್‌ನ ವೇಯ್ನ್ ರೈಡ್‌ನೌರ್ ಅವರಿಗೆ ಮಾರ್ಗದರ್ಶನ ಮಾಡಿದ್ದರು. ಪೈಲಟ್ ಸುಮಿತ್ ಸಭರ್ವಾಲ್ ಹಾಗೂ ಸುನೀಲ್ ಸೈಮನ್ ಕಾರ್ಯಾಚರಣೆಯ ಮೇಲುಸ್ತುವಾರಿ ಮೇಲೆ ಹೆಚ್ಚಿನ ನಿಗಾ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.