ADVERTISEMENT

ಬರ್ತ್‌ಡೇ ಕೇಕ್ ಮೇಲೆ ಮೋದಿ ಚಿತ್ರ, ಪ್ರಧಾನಿಯ ಮನಕದ್ದ ಬೆಳಕು ಯಾರು ಗೊತ್ತೆ?

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2018, 12:28 IST
Last Updated 3 ಅಕ್ಟೋಬರ್ 2018, 12:28 IST
ಬೆಳಕು ಬರ್ತ್‌ಡೇ ಕೇಕ್ ಮೇಲೆ ನರೇಂದ್ರ ಮೋದಿ ಚಿತ್ರ
ಬೆಳಕು ಬರ್ತ್‌ಡೇ ಕೇಕ್ ಮೇಲೆ ನರೇಂದ್ರ ಮೋದಿ ಚಿತ್ರ   

ಬೆಂಗಳೂರು: ತನ್ನ ಹುಟ್ಟುಹಬ್ಬದ ಕೇಕ್ ಮೇಲೆ ಪ್ರಧಾನಿಯ ಚಿತ್ರಬೇಕು ಎಂದು ಹಟ ಮಾಡಿದ ಹುಡುಗಿಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

‘ಇಂದು ನನ್ನ ಮಗಳು ಬೆಳಕು ಹುಟ್ಟುಹಬ್ಬ. ನಿನ್ನ ಹುಟ್ಟುಹಬ್ಬಕ್ಕೆ ಏನು ಬೇಕು ಎಂದು ಕೇಳಿದೆ. ಆವಳು, ‘ನನ್ನ ಬರ್ತ್‌ಡೇ ಕೇಕ್ ಮೇಲೆ ಪ್ರಧಾನಿ ನರೇಂದ್ರ ಮೋದಿ ಚಿತ್ರ ಇರಬೇಕು’ ಎಂದು ಬಯಸಿದಳು. ‘ಪ್ರಧಾನಿ ನರೇಂದ್ರ ಮೋದಿ ಖಂಡಿತವಾಗಿಯೂ ಒಬ್ಬ ಕಳ್ಳ. ಮಗುವಿನ ಹೃದಯಕದ್ದ ಕಳ್ಳ’ ಎಂದು ಮಹೇಶ್ ವಿಕ್ರಮ್ ಹೆಗಡೆ ಎಂಬುವವರು ಟ್ವಿಟ್ ಮಾಡಿದ್ದರು.

ಹೆಗಡೆ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ‘ಬೆಳಕುಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿಬಿಡಿ. ಅವಳ ಖುಷಿ ಮತ್ತು ಆರೋಗ್ಯಕ್ಕಾಗಿ ನಾನು ದೇವರನ್ನು ಬೇಡುತ್ತೇನೆ’ ಎಂದು ಟ್ವೀಟ್ ಮಾಡಿದ್ದರು. ಬೆಳಕು ಹುಟ್ಟುಹಬ್ಬ ಟ್ವಿಟರ್‌ನಲ್ಲಿ ಟ್ರೆಂಡ್‌ಆಗಿತ್ತು. ಅನೇಕರು ಆಕೆಗೆ ಶುಭಾಶಯ ಕೋರಿದ್ದರು.

ADVERTISEMENT

ಮಗುವಿನ ತಂದೆ ಮಹೇಶ್ ವಿಕ್ರಮ್ ಹೆಗಡೆ ಸುಳ್ಳುಸುದ್ದಿ ಪ್ರಕಟಣೆ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿದ್ದವರು. ಇವರು‘ಪೋಸ್ಟ್‌ಕಾರ್ಡ್‌ ನ್ಯೂಸ್‌’ನ ಸಹಸ್ಥಾಪಕರೂ ಹೌದು.

ಫ್ರಾನ್ಸ್‌ನೊಂದಿಗೆ ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರತಿಪಕ್ಷ ಕಾಂಗ್ರೆಸ್‌ ‘ಚೋರ್’ (ಕಳ್ಳ) ಎಂದು ಹೀಗಳೆದಿತ್ತು. ತಮ್ಮ ಮಗಳ ಹುಟ್ಟುಹಬ್ಬದ ನೆಪದಲ್ಲಿ ಮಹೇಶ್ ಹೆಗಡೆ ಪ್ರತಿಪಕ್ಷಗಳ ಆರೋಪವನ್ನೂ ಮೋದಿ ಪರ ತಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.‘ಹಿಂದೂಸ್ತಾನ್ ಟೈಮ್ಸ್’, ‘ಎನ್‌ಡಿಟಿವಿ’ ಸೇರಿದಂತೆ ಹಲವು ರಾಷ್ಟ್ರೀಯ ಮಾಧ್ಯಮಗಳು ಬೆಳಕು ಹುಟ್ಟುಹಬ್ಬದ ಸುದ್ದಿ ಪ್ರಕಟಿಸಿದ್ದವು.

‘ಸುದ್ದಿಯ ಇನ್ನೊಂದು ಮುಖವನ್ನು ಮಾಧ್ಯಮಗಳು ಗ್ರಹಿಸಿಲ್ಲ’ ಎಂದು ಕೆಲವರು ಆಕ್ಷೇಪಿಸಿದ್ದರು.‘ನೀವೆಲ್ಲರೂ ಮೋದಿ ಅವರ ಮುಖವಾಣಿಗಳೇ ಆಗಿದ್ದೀರಿ. ಸುಳ್ಳು ಸುದ್ದಿ ಪ್ರಕಟಿಸುವ ವೆಬ್‌ಸೈಟ್ ‘ಪೋಸ್ಟ್‌ಕಾರ್ಡ್‌’ನ ಸಹಸ್ಥಾಪಕ ಈಮಹೇಶ್‌ ವಿಕ್ರಮ್ ಹೆಗಡೆ ಎನ್ನುವ ಅಂಶವನ್ನು ಏಕೆ ಮರೆಮಾಚಿದ್ದೀರಿ. ಇದು ಪ್ರಚಾರಕ್ಕಾಗಿ ನಡೆಸಿದ ಗಿಮಿಕ್’ ಎಂದು ಹಲವರು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.