ADVERTISEMENT

ಕೇಂದ್ರ‌ ಸರ್ಕಾರದ ವೈಫಲ್ಯ ಒಪ್ಪಿಕೊಂಡ ಆರ್‌ಎಸ್‌ಎಸ್‌ ನಾಯಕ: ಸಂಜಯ್‌ ರಾವತ್

ಪಿಟಿಐ
Published 15 ಅಕ್ಟೋಬರ್ 2021, 15:50 IST
Last Updated 15 ಅಕ್ಟೋಬರ್ 2021, 15:50 IST
ಶಿವಸೇನಾ ನಾಯಕ ಸಂಜಯ್‌ ರಾವತ್‌
ಶಿವಸೇನಾ ನಾಯಕ ಸಂಜಯ್‌ ರಾವತ್‌   

ಮುಂಬೈ: ಸಮಾಜದಲ್ಲಿ ಮಾದಕ ವಸ್ತು ಸೇವನೆ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಕಳವಳ ವ್ಯಕ್ತಪಡಿಸಿದ್ದರು.‌ ಅದರ ಬೆನ್ನಲ್ಲೇ ಇದೀಗ ಶಿವಸೇನಾ ನಾಯಕ ಸಂಜಯ್‌ ರಾವತ್‌ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.‌ ನೋಟು ರದ್ದತಿಯು ದೇಶದಲ್ಲಿ ಮಾದಕವಸ್ತು ಹಾವಳಿಯನ್ನು ತಡೆಯಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದರು. ಆದರೆ, ಅದು ಇನ್ನೂ ಪ್ರಸ್ತುತವಿದೆ ಎಂದು ಕಿಡಿಕಾರಿದ್ದಾರೆ.

ನಾಗಪುರದಲ್ಲಿ ನಡೆದ ವಿಜಯದಶಮಿಯಲ್ಲಿ ಭಾಗವಹಿಸಿ ಮಾತನಾಡಿದ ರಾವತ್‌, ಭಾಗವತ್‌ ಅವರು ಮಾದಕವಸ್ತು ಸೇವನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅವರ ಹೇಳಿಕೆಗಳು ಕೇಂದ್ರ ಸರ್ಕಾರ ನೀಡಿದ ಭರವಸೆಗಳಲ್ಲಿ ಏನೋ ದೋಷವಿದೆ ಎಂಬುದನ್ನು ಒಪ್ಪಿಕೊಂಡಂತೆ ಇವೆ ಎಂದಿದ್ದಾರೆ.

ʼನೋಟು ರದ್ದತಿ ಅನುಷ್ಠಾನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಮಾದಕ ವಸ್ತು ವ್ಯವಹಾರದಿಂದಹೆಚ್ಚುತ್ತಿರುವ ಕಪ್ಪುಹಣ ಬಳಕೆಗೆ ಕಡಿವಾಣ ಹಾಕಲು ಮತ್ತುದೇಶ ವಿರೋಧಿ ಚಟುವಟಿಕೆಗಳ ನಿಯಂತ್ರಣಕ್ಕೆ ನೆರವಾಗಲಿದೆ ಎಂದುನಿರಂತರವಾಗಿ ಭರವಸೆ ನೀಡಿದ್ದರುʼ

ADVERTISEMENT

ʼಆದರೆ, ಇಂತಹ ಹಿಂದುತ್ವವಾದಿ ಸರ್ಕಾರ ದೀರ್ಘಕಾಲದಿಂದ ಅಧಿಕಾರದಲ್ಲಿದ್ದರೂ ಆರ್‌ಎಸ್‌ಎಸ್‌ ಮುಖ್ಯಸ್ಥರು ಮಾದಕವಸ್ತು ಮತ್ತು ಹಣದ ಬಳಕೆ ಬಗ್ಗೆ ಇಂದು ಕಳವಳ ವ್ಯಕ್ತಪಡಿಸಿದ್ದಾರೆ.ಆದ್ದರಿಂದ ಆತ ಹೇಳಿರುವ ಸದ್ಯದ ಈ ಸ್ಥಿತಿಗೆ ಹೊಣೆ ಯಾರು ಎಂಬುದನ್ನು ತಿಳಿಯಲು ನಾವು ಬಯಸುತ್ತೇವೆʼ ಎಂದು ಕುಟುಕಿದ್ದಾರೆ.

ʼಕೇಂದ್ರದಲ್ಲಿ ವಿಶ್ವಾಸಾರ್ಹರಾಷ್ಟ್ರೀಯವಾದಿ ಸರ್ಕಾರವಿದೆ. ಪ್ರಧಾನಮಂತ್ರಿಯವರೂ ಹಿಂದುತ್ವ ಚಿಂತನೆಯಕಟ್ಟಾ ಬೆಂಬಲಿಗರಾಗಿದ್ದಾರೆ.ಇದರ ಹೊರತಾಗಿಯೂ, ಮಾದಕವಸ್ತು ಬಳಕೆಯಂತಹ ವಿಚಾರಗಳು ದೇಶದಲ್ಲಿ ಪ್ರಸ್ತುತವಾಗಿವೆ ಎಂದರೆ ಆರ್‌ಎಸ್‌ಎಸ್‌ ಮುಖ್ಯಸ್ಥರು ಯಾರನ್ನು ಹೊಣೆ ಮಾಡುತ್ತಾರೆ? ಕೇಂದ್ರ ಸರ್ಕಾರದ ಭರವಸೆ ಮತ್ತು ಅನುಷ್ಠಾನಗಳಲ್ಲಿ ದೋಷಗಳಿವೆ ಎಂಬುದನ್ನು ಅವರು (ಭಾಗವತ್)‌ಈ ರೀತಿಯಲ್ಲಾದರೂ ಒಪ್ಪಿಕೊಂಡಿದ್ದಾರೆʼ ಎಂದು ಪ್ರತಿಪಾದಿಸಿದ್ದಾರೆ.

ಮುಂಬರುವ ಲೋಕಸಭೆಯ ಉಪಚುನಾವಣೆ ಬಗ್ಗೆಯೂ ಮಾತನಾಡಿದಸೇನಾ ನಾಯಕ, ದಾದ್ರಾ, ನಗರ್‌ ಮತ್ತು ಹವೇಲಿ ಉಪಚುನಾವಣೆಗಳಲ್ಲಿ ನಾವು ಜಯ ಗಳಿಸುತ್ತೇವೆ. ಇದಾದ ಬಳಿಕ ನಾವು22 ಸಂಸದರನ್ನು ಹೊಂದಲಿದ್ದೇವೆ. ಇದರೊಂದಿಗೆ ರಾಷ್ಟ್ರ ರಾಜಕಾರಣ ಮತ್ತು2024ರ ಸಾರ್ವತ್ರಿಕ ಚುನಾವಣೆಯಲ್ಲಿ ಮುಖ್ಯ ಪಾತ್ರವಹಿಸಲಿದ್ದೇವೆʼ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.