ADVERTISEMENT

ದಾಳಿ ಬಗ್ಗೆ ಎಚ್ಚರಿಕೆ ಲಭಿಸಿದ್ದರೂ ಕ್ರಮ ಕೈಗೊಂಡಿಲ್ಲ ಯಾಕೆ?: ಮಮತಾ ಬ್ಯಾನರ್ಜಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 14:13 IST
Last Updated 18 ಫೆಬ್ರುವರಿ 2019, 14:13 IST
   

ಕೋಲ್ಕತ್ತ: ಪುಲ್ವಾಮ ದಾಳಿ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದರೂ, ದಾಳಿಯನ್ನು ತಡೆಯಲು ಕ್ರಮ ಕೈಗೊಳ್ಳಲಿಲ್ಲ ಯಾಕೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನುಪ್ರಶ್ನಿಸಿದ್ದಾರೆ.

ಸೋಮವಾರ ಮಾಧ್ಯಮದವರಲ್ಲಿ ಮಾತನಾಡಿದ ಮಮತಾ, ಚುನಾವಣೆಗೆ ಮುನ್ನ ಪುಲ್ವಾಮದಲ್ಲಿ ಆತ್ಮಾಹುತಿ ದಾಳಿ ಹೇಗೆನಡೆಯಿತು? ಎಂಬುದರ ಬಗ್ಗೆ ಅಚ್ಚರಿ ಮತ್ತು ಸಂದೇಹವಿದೆ.ಚುನಾವಣೆಗೆ ಮುನ್ನ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆಗಳು ಫೆಬ್ರುವರಿ 8ರಂದು ಸರ್ಕಾರಕ್ಕೆ ಮಾಹಿತಿ ನೀಡಿದ್ದವು. ಹೀಗಿರುವಾಗ ಯಾಕೆ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. 78 ಕಾವಲುಪಡೆಯನ್ನು ಒಟ್ಟಿಗೆ ಸಾಗಲು ಅನುಮತಿ ನೀಡಿರುವುದು ಯಾಕೆ? ಎಂದಿದ್ದಾರೆ.

ಪುಲ್ವಾಮ ದಾಳಿ ನಂತರ ಪಶ್ಚಿಮ ಬಂಗಾಳದಲ್ಲಿ ಸಂಘರ್ಷವನ್ನುಂಟು ಮಾಡುವುದಕ್ಕಾಗಿ ಬಿಜೆಪಿ ಮತ್ತು ಆರ್ ಎಸ್‍ಎಸ್ ಯತ್ನಿಸುತ್ತಿದೆಎಂದು ಆರೋಪಿಸಿದ ಅವರು,ರಾತ್ರಿ ಹೊತ್ತು ಆರ್‌ಎಸ್‍ಎಸ್ ಪ್ರಚಾರಕರು ರಾಷ್ಟ್ರಧ್ವಜ ಹಿಡಿದು ರಸ್ತೆಯಲ್ಲಿ ಓಡಾಡಿ ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ.ದೇಶಭಕ್ತಿ ಹೆಸರಿನಲ್ಲಿ ನಾವು ಈ ರೀತಿಯ ಚಟುವಟಿಕೆಗಳಿಗೆ ಬೆಂಬಲ ನೀಡುವುದಿಲ್ಲ.ಇಂಥಾ ಚಟುವಟಿಕೆಗಳಿಗೆ ಬಲಿಯಾಗಬೇಡಿ ಎಂದು ನಾನು ಜನರಲ್ಲಿ ಮನವಿ ಮಾಡುತ್ತೇನೆ.

ADVERTISEMENT

ಕೋಲ್ಕತ್ತದ ಬೆಹಾಲಾ, ಬಂಗೋನ್, ನಾರ್ಥ್ 24 ಪರ್ಗಾನಾಸ್ ಮತ್ತು ಹೂಗ್ಲಿ ಜಿಲ್ಲೆಯ ಸೆರಾಂಪೋರ್‌ ನಲ್ಲಿ ಈ ರೀತಿಯ ಚಟುವಟಿಕೆ ನಡೆಯುತ್ತಿದೆ. ಬಿಜೆಪಿ ಮತ್ತುಆರ್‌ಎಸ್‍ಎಸ್ ರಾಜ್ಯದಲ್ಲಿ ಕೋಮು ಸಂಘರ್ಷವನ್ನುಂಟು ಮಾಡಲು ಯತ್ನಿಸುತ್ತಿದೆ. ರಾಜ್ಯದಲ್ಲಿ ಕಾನೂನು ಕಾಪಾಡಲುನಾನು ಆಡಳಿತಾಧಿಕಾರಿಗಳಲ್ಲಿ ಹೇಳಿದ್ದೇನೆ ಎಂದಿದ್ದಾರೆ ಮಮತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.