ADVERTISEMENT

ಮನಮೋಹನ ಸಿಂಗ್‌ಗೆ ‘ಭಾರತ ರತ್ನ’ ಏಕಿಲ್ಲ?: ಪಿ. ಚಿದಂಬರಂ

ಪಿಟಿಐ
Published 10 ಫೆಬ್ರುವರಿ 2025, 16:04 IST
Last Updated 10 ಫೆಬ್ರುವರಿ 2025, 16:04 IST
ಮನಮೋಹನ ಸಿಂಗ್‌
ಮನಮೋಹನ ಸಿಂಗ್‌   

ನವದೆಹಲಿ: ದೇಶಕ್ಕೆ ಅಪಾರ ಕೊಡುಗೆ ನೀಡಿರುವ ಮಾಜಿ ಪ್ರಧಾನಿ, ದಿವಂಗತ ಮನಮೋಹನ ಸಿಂಗ್‌ ಅವರಿಗೆ ‘ಭಾರತ ರತ್ನ’ವನ್ನು ಏಕೆ ಕೊಟ್ಟಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಅವರು ಸೋಮವಾರ ರಾಜ್ಯಸಭೆಯಲ್ಲಿ ಪ್ರಶ್ನಿಸಿದರು.

ಚಿದಂಬರಂ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ಸಂಸದ ದಿನೇಶ್‌ ಶರ್ಮಾ, ‘ಕಾಂಗ್ರೆಸ್‌, ಸಿಂಗ್‌ ಅವರಿಗೆ ಅಪಮಾನ ಮಾಡುವುದನ್ನು ಬಿಟ್ಟು ಬೇರೆ ಇನ್ನೇನು ನೀಡಿದೆ’ ಎಂದರು. 

ಕೇಂದ್ರ ಬಜೆಟ್‌ 2025–26ರ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಚಿದಂಬರಂ, ‘ಆಡಳಿತಾರೂಢ ಸರ್ಕಾರಕ್ಕೆ ಯಾವುದೇ ತತ್ವವಿಲ್ಲ. ಆದ್ದರಿಂದ ಯಾವುದೇ ನೀತಿಗಳು ಇಲ್ಲ’ ಎಂದು ದೂರಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.