ADVERTISEMENT

ಅಯೋಧ್ಯೆಯಲ್ಲಿ ಯಾಕೆ ವಿಶ್ವ ವಿದ್ಯಾನಿಲಯ ಸ್ಥಾಪಿಸಬಾರದು?: ಮನೀಶ್ ಸಿಸೋಡಿಯಾ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 3:55 IST
Last Updated 3 ಡಿಸೆಂಬರ್ 2018, 3:55 IST
   

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಬದಲು ವಿಶ್ವ ವಿದ್ಯಾನಿಲಯವೊಂದನ್ನು ಯಾಕೆ ಸ್ಥಾಪಿಸಬಾರದು ಎಂದು ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೇಳಿದ್ದಾರೆ.
ಹಿಂದೂ ಮತ್ತು ಮುಸ್ಲಿಂ ಸಮುದಾಯದವರಲ್ಲಿ ಕೇಳಿ. ಈ ಎರಡೂ ಸಮುದಾಯದವರು ಒಪ್ಪುವುದಾದರೆ ಅಲ್ಲೊಂದು ವಿಶ್ವ ವಿದ್ಯಾನಿಲಯ ಸ್ಥಾಪಿಸಿ, ಹಿಂದೂ, ಮುಸ್ಲಿಂ, ಕ್ರೈಸ್ತರ, ಭಾರತೀಯರ ಮತ್ತು ವಿದೇಶಿಯರ ಮಕ್ಕಳು ಜತೆಯಾಗಿ ಕಲಿಯಲಿ. ದೇವಾಲಯ ನಿರ್ಮಿಸುವುದರಿಂದ ರಾಮರಾಜ್ಯ ನಿರ್ಮಾಣವಾಗುವುದಿಲ್ಲ, ಶಿಕ್ಷಣದಿಂದ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂದು ಎನ್‍ಡಿಟಿವಿ ಜತೆ ಮಾತನಾಡಿದ ಸಿಸೋಡಿಯಾ ಹೇಳಿದ್ದಾರೆ.

ದೆಹಲಿಯಲ್ಲಿರುವ ಕೇಜ್ರಿವಾಲ್ ಸರ್ಕಾರವು ಶಿಕ್ಷಣಕ್ಕೆ ಪ್ರಥಮ ಆದ್ಯತೆಯನ್ನು ನೀಡಿದೆ. ಶಾಲೆಯಲ್ಲಿ ಮೂಲ ಸೌಕರ್ಯವನ್ನು ಹೆಚ್ಚಿಸುವುದರ ಜತೆಗೆ ಹೆಚ್ಚಿನ ಶಿಕ್ಷಕರಿಗೆ ಉದ್ಯೋಗ ನೀಡಿದ್ದಾರೆ.
ಅಯೋಧ್ಯೆಯಲ್ಲಿರುವ ಯುವ ಜನಾಂಗಕ್ಕೆ ಮಂದಿರ ಮತ್ತು ಮಸೀದಿಗಿಂತ ಶಿಕ್ಷಣ ಮತ್ತು ಉದ್ಯೋಗ ಬಹು ಮುಖ್ಯ. ಮಂದಿರದ ವಿಷಯದಿಂದಾಗಿ ಅಯೋಧ್ಯೆಯ ಅಭಿವೃದ್ಧಿ ಆಗುವುದಿಲ್ಲಎಂದು ಅಯೋಧ್ಯೆಯ ಸಾಕೇತ್ ಕಾಲೇಜಿನ ವಿದ್ಯಾರ್ಥಿ ದಿಲ್ದಾರ್ ರಿಜ್ವಿ ಹೇಳಿದ್ದಾರೆ.ಅಯೋಧ್ಯೆ ಅಭಿವೃದ್ಧಿ ಹೊಂದಿದರೆ ದೊಡ್ಡ ಕಂಪನಿಗಳು ಇಲ್ಲಿಗೆ ಬರುತ್ತವೆ. ನಮಗೆ ಉದ್ಯೋಗ ಸಿಗುತ್ತದೆ ಮತ್ತು ನಮ್ಮ ಜೀವನ ಕ್ರಮವೂ ಬದಲಾಗುತ್ತದೆ. ನಮಗೆ ಅದು ಬೇಕಿದೆ ಎಂದಿದ್ದಾರೆ ರಿಜ್ವಿ.

ಏತನ್ಮಧ್ಯೆ, ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಆರ್‌ಎಸ್‌ಎಸ್‌ ದೆಹಲಿಯಲ್ಲಿ ಶನಿವಾರ ರ‍್ಯಾಲಿ ನಡೆಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.