ADVERTISEMENT

ದೇಶ ಸ್ವತಂತ್ರವಾಗಿರುವಾಗ ಆಜಾದಿ ಘೋಷಣೆ ಕೂಗುವುದೇಕೆ: ರವಿ ಶಂಕರ್ ಪ್ರಸಾದ್ 

ಪಿಟಿಐ
Published 13 ಫೆಬ್ರುವರಿ 2020, 4:55 IST
Last Updated 13 ಫೆಬ್ರುವರಿ 2020, 4:55 IST
ರವಿ ಶಂಕರ್ ಪ್ರಸಾದ್
ರವಿ ಶಂಕರ್ ಪ್ರಸಾದ್    

ನವದೆಹಲಿ: ದೇಶ ಸ್ವತಂತ್ರವಾಗಿರುವಾಗ ಆಜಾದಿ ಘೋಷಣೆ ಕೂಗುವುದೇತಕೆ?ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಪ್ರತಿಭಟನಕಾರರನ್ನು ಪ್ರಶ್ನಿಸಿದ್ದಾರೆ.ಸಂವಿಧಾನದ ವಿಧಿ 19(1)ರ ಪ್ರಕಾರ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಆದರೆಅಂತಾ ಸ್ವಾತಂತ್ರ್ಯಗಳಿಗೆತಕ್ಕ ನಿರ್ಬಂಧಗಳೂ ಇವೆ ಎಂದಿದ್ದಾರೆ ಅವರು.

ಕೆಲವು ಪ್ರದೇಶಗಳಲ್ಲಿ ನಾವು 'ಆಜಾದಿ... ಆಜಾದಿ' ಎಂಬ ಘೋಷಣೆಗಳನ್ನು ಕೆಲವು ದಿನಗಳಿಂದ ಕೇಳುತ್ತಿದ್ದೇವೆ. ಯಾವುದರಿಂದ ಆಜಾದಿ? ಈ ದೇಶ ಸ್ವತಂತ್ರವಾಗಿದೆ.ಜನರು ಸರ್ಕಾರವನ್ನು ಮುಕ್ತವಾಗಿ ಟೀಕಿಸುತ್ತಾರೆ. ಯಾರಿಗೆ ಬೇಕಾದರೂ ಅವರು ಮತ ಹಾಕಬಹುದು. ಕೆಲವರು ವಿಶ್ವ ವಿದ್ಯಾಲಯಗಳನ್ನು ಮುತ್ತಿಗೆ ಹಾಕುತ್ತಾರೆ. ಪೊಲೀಸರೊಂದಿಗೆ ಜಗಳವಾಡುತ್ತಾರೆ. ಹೀಗಿರುವಾಗ ನೀವು ಯಾರಿಂದ ಸ್ವಾತಂತ್ರ್ಯ ಬಯಸುತ್ತಿದ್ದೀರಿ? ಎಂದು ಸಚಿವರು ಬುಧವಾರ ಟ್ವೀಟ್ ಮಾಡಿದ್ದಾರೆ.

ಟೈಮ್ಸ್ ನೌ ಸಮಾವೇಶದಲ್ಲಿ ಮಾತನಾಡಿದ ಪ್ರಸಾದ್, ನಿಮ್ಮ ಸ್ವಾತಂತ್ರ್ಯದ ಮಟ್ಟ ಎಷ್ಟಿದೆ ಅಂದರೆ ನೀವು ವಿಶ್ವವಿದ್ಯಾಲಯಕ್ಕೆಮುತ್ತಿಗೆ ಹಾಕುತ್ತೀರಿ. ಪೊಲೀಸರೊಂದಿಗೆ ಕಾದಾಡುತ್ತೀರಿ, ಯಾರಿಂದ ನಿಮಗೆ ಸ್ವಾತಂತ್ರ್ಯ ಬೇಕು ? ಈ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದ್ದಾರೆ.

ಅದೇ ವೇಳೆ ವಿಪಕ್ಷಗಳುಸಂವಿಧಾನದ ಸಂಸ್ಥೆಗಳನ್ನು ದೂರುತ್ತಿವೆ ಎಂದು ಪ್ರಸಾದ್ ಆರೋಪಿಸಿದ್ದಾರೆ.

ADVERTISEMENT

ಭಾರತದ ಚುನಾವಣಾ ಆಯೋಗನ್ನು ಟೀಕಿಸುತ್ತಿರುವುದು ಯಾರು? ಸಿಎಜಿಯನ್ನು ಸಾರ್ವಜನಿಕವಾಗಿ ಪರಿಹಾಸ ಮಾಡಿದ್ದು ಯಾರು? ಸುಪ್ರೀಂಕೋರ್ಟ್ ವಿರುದ್ಧ ಹೇಳಿಕೆ ನೀಡಿದವರು ಯಾರು? ಮಾಧ್ಯಮಗಳ ವಿರುದ್ಧ ದೂರುತ್ತಿರುವವರು ಯಾರು? ಯಾಕೆಂದರೆ ರಾಹುಲ್ ಗಾಂಧಿಗೆ ಸರ್ಕಾರವನ್ನು ಮುಖಾಮುಖಿಯಾಗಲು ಸಾಧ್ಯವಾಗುತ್ತಿಲ್ಲ.

ಭಾರತದ ಸಶಸ್ತ್ರ ಪಡೆ ಮತ್ತು ಇತರ ಸಂಸ್ಥೆಗಳ ಸಮಗ್ರತೆಯಲ್ಲಿ ರಾಜಿ ಮಾಡಿಕೊಂಡಿದ್ದ ಯಾರು? ಬಾಲಕೋಟ್ ಸಾಕ್ಷ್ಯ ಕೇಳುತ್ತಿರುವವರು ಯಾರು? ಭಾರತಕ್ಕೆ ಸಂಬಂಧಪಟ್ಟಂತೆ ಇದೆಲ್ಲವೂ ತೊಂದರೆಯನ್ನೊಡ್ಡುವ ವಿಷಯಗಳೇ ಆಗಿವೆ.ಪ್ರಶಸ್ತಿ ವಾಪಸ್ ಮಾಡಲು ತುದಿಗಾಲಲ್ಲಿ ನಿಂತಿರುವವರಲ್ಲಿ ನಾನೊಂದುಪ್ರಶ್ನೆ ಕೇಳಲು ಬಯಸುತ್ತೇನೆ. ಅದೇನೆಂದರೆ ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯರನ್ನು ಅತ್ಯಾಚಾರ ಮಾಡಿ ಅವರನ್ನು ಬಲವಂತವಾಗಿ ಮತಾಂತರ ಮಾಡುವಾಗ ನೀವು ಯಾಕೆ ಮೌನವಾಗಿದ್ದಿರಿ? ಅವರ ಯಾತನೆಗಳು ನಿಮ್ಮನ್ನು ಕೆರಳಿಸಿಲ್ಲವೇ? ಎಂದು ಪ್ರಸಾದ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.